ಲಂಡನ್: ಇಂಗ್ಲೆಂಡ್ (England) ಕ್ರಿಕೆಟ್‍ನ ದಂತಕಥೆ ವೇಗಿ ಜೇಮ್ಸ್ ಆಂಡರ್ಸನ್ (James Anderson) ಟೆಸ್ಟ್ ಕ್ರಿಕೆಟ್‍ಗೆ (Cricket) ವಿದಾಯ ಘೋಷಣೆ ಮಾಡಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು `ಎಲ್ಲರಿಗೂ ನಮಸ್ಕಾರ. ಲಾರ್ಡ್ಸ್‌ನಲ್ಲಿ ಬೇಸಿಗೆ ಋತುವಿನ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಪಂತ್ ಔಟ್; ಡೆಲ್ಲಿ ತಂಡಕ್ಕೆ ಹೊಸ ನಾಯಕ – ಬೆಂಗಳೂರು ಬಾಯ್ಸ್ ಕೈಹಿಡಿಯುತ್ತಾ ಲಕ್?
ನನ್ನ ಬಾಲ್ಯದಿಂದಲೂ ನನ್ನಿಷ್ಟದ ಕ್ರಿಕೆಟ್‍ನ್ನು ಆಡುತ್ತಿದ್ದೆ. 20 ವರ್ಷಗಳ ಸುದೀರ್ಘ ಕಾಲ ಇಂಗ್ಲೆಂಡ್ ಪರ ಆಡಿದ್ದೇನೆ. ಇನ್ನು ಮುಂದೆ ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ತಂಡದಿಂದ ಹಿಂದೆ ಸರಿಯಲು ಮತ್ತು ನೂತನ ಆಟಗಾರರ ಕನಸುಗಳನ್ನು ನನಸಾಗಿಸಲು ಇದು ಸೂಕ್ತ ಸಮಯ ಮತ್ತು ನಿರ್ಧಾರ ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ಕ್ರಿಕೆಟ್ ಜೀವನಕ್ಕೆ ಅಚಲ ಬೆಂಬಲ ನೀಡಿದ ತಮ್ಮ ಕುಟುಂಬಕ್ಕೂ ಆಂಡರ್ಸನ್ ಈ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಡೇನಿಯೆಲ್ಲಾ, ಲೋಲಾ, ರೂಬಿ ಮತ್ತು ನನ್ನ ಹೆತ್ತವರ ಬೆಂಬಲವಿಲ್ಲದೆ ನಾನು ಕ್ರಿಕೆಟ್‍ನಲ್ಲಿ ತೊಡಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಜೊತೆ ಆಡಿದ ಆಟಗಾರರು ಹಾಗೂ ಕೋಚ್‍ಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಆಂಡರ್ಸನ್ 400 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೇ ವಿವಿಧ ಸ್ವರೂಪಗಳಲ್ಲಿ 987 ವಿಕೆಟ್‍ಗಳನ್ನು ಕಬಳಿಸಿದ್ದಾರೆ. 2015ರ ವಿಶ್ವಕಪ್‍ನಲ್ಲಿ ಅವರು ತಮ್ಮ ಕೊನೆಯ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರೂ. ಇದನ್ನೂ ಓದಿ: ರಿಷಭ್ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್ ಒಂದು ಪಂದ್ಯದಿಂದ ಅಮಾನತು!