ಬರ್ಮಿಂಗ್ ಹ್ಯಾಮ್: ಇಲ್ಲಿನ ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟದ ಬಳಿಕವೂ ಇಂಗ್ಲೆಂಡ್ 31 ರನ್ ರೋಚಕ ಗೆಲುವು ಪಡೆದಿದೆ. ಈ ಮೂಲಕ ಐತಿಹಾಸಿಕ 1000 ನೇ ಟೆಸ್ಟ್ ಪಂದ್ಯ ಗೆದ್ದು ಇಂಗ್ಲೆಂಡ್ ಡಬಲ್ ಸಂಭ್ರಮ ಆಚರಿಸಿದೆ.
ಮೊದಲ ಟೆಸ್ಟ್ ಪಂದ್ಯದ ಆರಂಭದಿಂದಲೂ ಏಳು ಬೀಳು ಕಂಡ ವಿರಾಟ್ ಬಳಗ ಕೊನೆಗೂ ಸೋಲುಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. 110ಕ್ಕೆ 5 ವಿಕೆಟ್ ಕಳೆದು ಕೊಂಡು ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಗೆಲ್ಲಲು 84 ರನ್ ಗಳು ಮಾತ್ರ ಅಗತ್ಯವಿತ್ತು. ಆದರೆ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (20) ಔಟಾಗುವ ಮೂಲಕ ಟೀಂ ಇಂಡಿಯಾ ಆಘಾತ ಎದುರಿಸಿತು.
Adelaide – Kohli 115 & 141 – Lost
Centurion – Kohli 153 & 5 – Lost
Edgbaston – Kohli 149 & 51 – Lost
Kohli did nothing wrong. #EngvInd
— Bharath Seervi (@SeerviBharath) August 4, 2018
ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಆದರೆ ಈ ವೇಳೆ 51 ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ತಂಡಕ್ಕೆ ಆಘಾತ ನೀಡಿದರು. ಕೊಹ್ಲಿ ವಿಕೆಟ್ ಕಳೆದು ಕೊಂಡ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಆದರೆ ಅದೇ ಓವರ್ ನಲ್ಲಿ ಮಹಮ್ಮದ್ ಶಮಿ ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ತಂಡಕ್ಕೆ ಡಬಲ್ ಅಘಾತ ನೀಡಿದರು.
ಈ ಹಂತದಲ್ಲಿ ಗೆಲ್ಲಲು 53 ರನ್ ಗಳಿಸಬೇಕಿದ್ದ ಟೀಂ ಇಂಡಿಯಾಗೆ ಪಾಂಡ್ಯ ಆಸರೆಯಾಗುವ ನಿರೀಕ್ಷೆ ಇತ್ತು. ಆದರೆ ಪಾಂಡ್ಯಗೆ ಸೂಕ್ತ ಜೊತೆಯಾಟ ನೀಡದ ಶರ್ಮಾ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 31 ರನ್ ಗಳಿಸಿದ್ದ ಪಾಂಡ್ಯ ಸಹ ಸ್ಟೋಕ್ಸ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡುವ ಮೂಲಕ ಟೀಂ ಇಂಡಿಯಾ ಸೋಲನ್ನು ಖಚಿತಪಡಿಸಿದರು.
Hardik Pandya (22+28*) becomes the only second Indian batsman to aggregate 50+ runs in this Test match. His skipper, Virat Kohli, the other made 200 runs!#ENGvIND#INDvENG
— Mohandas Menon (@mohanstatsman) August 4, 2018
ಇಂಗ್ಲೆಂಡ್ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಬೆನ್ ಸ್ಟೋಕ್ಸ್ 14.2 ಓವರ್ ಗಳಲ್ಲಿ 40 ರನ್ ನೀಡಿ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ತಲಾ 2, ಕುರ್ರನ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
ಪಂದ್ಯದ ರೋಚಕ ಹಂತ ತಲುಪಲು ಕಾರಣರಾದ ಟೀಂ ಇಂಡಿಯಾ ನಾಯಕ ಕೊಹ್ಲಿ 51 ರನ್ (4 ಬೌಂಡರಿ) ಹೋರಾಟ ವ್ಯರ್ಥವಾಯಿತು. ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಒಟ್ಟಾರೆ 200 ರನ ಗಳಿಸಿದರು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮೊದಲ ಗೆಲುವು ಪಡೆಯುವ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಆಡಿರುವ 58 ಪಂದ್ಯಗಳಲ್ಲಿ 31 ರಲ್ಲಿ ಸೋಲುಂಡಿದೆ.