ಹಾಸನ: ಈಗಿನ ಎಜುಕೇಶನ್ ಸಿಸ್ಟಮ್ ನಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಂ ಇದ್ದರೂ ಇಲ್ಲದಂತಾಗಿದೆ ಎಂದು ಸಿಎಂ ಮತ್ತು ವಿಶ್ವವಿದ್ಯಾಲಯಗಳ ವಿಸಿಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಿನ್ನೆ ನಡೆದಿದೆ.
ಹೇಮಂತ್ ಗೌಡ(20) ಮೃತ ದುರ್ದೈವಿ. ಈತ ಅರಸೀಕೆರೆ ಮೂಲದವನಾಗಿದ್ದಾನೆ. ಹಾಸನ ನಗರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಈತ, ನಿನ್ನೆ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement
Advertisement
ಹೇಮಂತ್ ಗೌಡ ಸಾಯುವ ಮುನ್ನ ಸುಮಾರು 13 ನಿಮಿಷ 21 ಸೆಕೆಂಡ್ ಸೆಲ್ಫಿ ವೀಡಿಯೋ ಮಾಡಿದ್ದಾನೆ. ಅದರಲ್ಲಿ ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಎಜುಕೇಶನ್ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ನ್ಯೂಸ್ ಚಾನಲ್, ಟ್ವಿಟ್ಟರ್, ಫೇಸ್‍ಬುಕ್, ವ್ಯಾಟ್ಸಪ್ ಎಲ್ಲದರಲ್ಲೂ ಈ ವೀಡಿಯೋ ಅಪ್ ಲೋಡ್ ಮಾಡಿ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಸ್ನೇಹಿತ ಬಿಎಂಟಿಸಿ ಬಸ್ ಡ್ರೈವರ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್
Advertisement
Advertisement
ನನ್ನ ಸುಟ್ಟರೆ ಬೂದಿಯಾಗುತ್ತೆ, ಮಣ್ಣು ಮಾಡಿದರೆ ಕೊಳೆಯುತ್ತದೆ. ಆದ್ದರಿಂದ, ನನ್ನ ಅಂಗಾಂಗಳನ್ನು ದಾನ ಮಾಡಿ. ಜಗದ್ಗುರು ಶ್ರೀ ನಿರ್ಮಲಾನಂಧನಾಥ ಸ್ವಾಮೀಜಿ ಆಶೀರ್ವಾದ ಪಡೆಯುವುದು ನನ್ನ ಜೀವನದ ಆಸೆಯಾಗಿತ್ತು. ಸಿಎಂ, ಎಜುಕೇಶನ್ ಮಿನಿಸ್ಟರ್, ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು. ಅಪ್ಪ-ಅಮ್ಮ ನಾನು ಬೋಡಿರ್ಂಗ್‍ನಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯನ್ನ ಮಿಸ್ ಮಾಡ್ಕಂಡೆ. ಈಗಲೂ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ತನ್ನ ಗೆಳತಿಗೆ ಥ್ಯಾಂಕ್ಸ್ ಹೇಳಿರುವ ಆತ, ತನ್ನ ಅಂತ್ಯಕ್ರಿಯೆಯಲ್ಲಿ ಮಾಲ್ಗೊಳ್ಳವಂತೆ ಗೆಳತಿಗೆ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 5 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ – ಇಬ್ಬರ ಬಂಧನ