ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇತ್ತ ಮಗಳನ್ನು ಕಳೆದುಕೊಂಡ ಮಧು ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣ ಸಂಬಂಧ ಎಸ್‍ಪಿಯವರನ್ನು ಭೇಟಿ ಮಾಡಲು ಹೋಗಿದ್ದ ವೇಳೆ ಮಧು ತಂದೆ ನಾಗರಾಜ್ ಪತ್ತಾರ್ ಕುಸಿದು ಬಿದ್ದಿದ್ದಾರೆ. ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಸುದ್ದಿಗೋಷ್ಠಿ:
ವಿಶ್ವಕರ್ಮ ಸಮಾಜ ಮತ್ತು ಮಧು ಪೋಷಕರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಏ.25ರಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದೆ. ಪೊಲೀಸರು ಕಂಪ್ಲೆಂಟ್ ಕೊಟ್ಟರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ರು. ಇದನ್ನೂ ಓದಿ: #Justice4Madhu – ಆಕೆಯದ್ದು ಆತ್ಮಹತ್ಯೆಯಲ್ಲ ರೇಪ್ & ಮರ್ಡರ್?
Advertisement
ಆರೋಪಿ ಸುದರ್ಶನ್ ಯಾದವ್ ಮಾವ ಆಂಜನೇಯ, ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಮೊಬೈಲ್ ಸಿಕ್ಕಿದೆ. ಮಹಿಳಾ ಠಾಣೆಯಲ್ಲಿ ದೂರು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿದರು. ಕಾಲೇಜು ಲೈಬ್ರರಿ ಬಳಿ ಮಧು ಗಾಡಿ ಇತ್ತು. ಆರೋಪಿ ಯುವಕ ಟಾರ್ಚರ್ ಕೊಡುತ್ತಿದ್ದನು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
Advertisement
ಆಂಜನೇಯ ಸದರ್ ಬಜಾರ್ ಠಾಣೆಯ ರೈಟರ್ ಆಗಿದ್ದಾನೆ. ಅವನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಾಪತ್ತೆ ದೂರು ತೆಗೆದುಕೊಳ್ಳಲು ಎರಡು ದಿನ ತಡ ಮಾಡಿದ್ದಾರೆ. ಸುದರ್ಶನ್ ತೋಟದಲ್ಲಿ ಕೊಲೆ ನಡೆದಿದೆ. ವಿಜಯ್ ಎನ್ನುವ ವ್ಯಕ್ತಿ ಕೂಡ ಇದರಲ್ಲಿ ಭಾಗವಹಿಸಿದ್ದಾನೆ. ಇದು ಒಬ್ಬರಿಂದ ಆದ ಕೊಲೆ ಅಲ್ಲ. ಡೆತ್ ನೋಟ್ ಬರೆದ ಅಕ್ಷರ ನಮ್ಮ ಹುಡಿಗೆಯದ್ದೇ ಆಗಿದೆ. ಆಕೆಗೆ ಸರಿಯಾಗಿ ಕನ್ನಡ ಬರೆಯಲು ಬರಲ್ಲ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಇದ್ರೆ ಆಕೆ ಆರೋಪಿ ಹೊಲಕ್ಕೆ ಯಾಕೆ ಹೋಗಬೇಕಿತ್ತು. ಈಗ ರಿಪೋರ್ಟ್ ಬರೋವರೆಗೂ ಕಾಯಬೇಕು ಎಂದು ಎಸ್.ಪಿ ಹೇಳಿದ್ದಾರೆ. ಒಟಿನಲ್ಲಿ ಆರೋಪಿ ಸಂಬಂಧಿ ಆಂಜನೇಯನಿಗೆ ಶಿಕ್ಷೆಯಾಗಬೇಕು ಎಂದು ಹೆತ್ತವರು ಆಗ್ರಹಿಸಿದರು. ಇದನ್ನೂ ಓದಿ: ಎಲ್ಲವನ್ನೂ ಸಹಿಸಿಕೊಂಡಿದ್ದರಿಂದ ನನ್ನ ಮಗಳಿಗೆ ಈ ಗತಿ ಬಂದಿದೆ – ಮಧು ತಾಯಿ ಕಣ್ಣೀರು
https://www.youtube.com/watch?v=iL0SAdDIdlQ