ಶಿವಮೊಗ್ಗ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ (Engineering Student) ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ವಾಜಪೇಯಿ ಬಡಾವಣೆಯ ಹಾಸ್ಟೆಲ್ ಒಂದರಲ್ಲಿ ನಡೆದಿದೆ. ಯುವಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತನನ್ನು ಬಳ್ಳಾರಿ ಮೂಲದ ಗಣೇಶ್ (21) ಎಂದು ಗುರುತಿಸಲಾಗಿದೆ. ಈತ ನಗರದ ಖಾಸಗಿ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಜಪೇಯಿ ಬಡಾವಣೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಇಂದು (ಜ.9) ಸ್ನಾನಕ್ಕೆ ತೆರಳಿದ್ದ ವೇಳೆ ಯುವಕ ಕುಸಿದು ಬಿದ್ದಿದ್ದ. ಇದನ್ನೂ ಓದಿ: ಶಿವಮೊಗ್ಗ ಮೂಲದ ಬಿ.ಕಾಂ ವಿದ್ಯಾರ್ಥಿನಿ ಚಿಕ್ಕಮಗಳೂರಲ್ಲಿ ಹೃದಯಾಘಾತಕ್ಕೆ ಬಲಿ
ಆತನನ್ನ ಹಾಸ್ಟೆಲ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲಿ ಗಣೇಶ್ ಮೃತಪಟ್ಟಿದ್ದಾನೆ. ಗಣೇಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮದುವೆಯಾದ ಮರುದಿನವೇ ಹೃದಯಾಘಾತ – ನವವಿವಾಹಿತ ಸಾವು

