ಯಾದಗಿರಿ: ಸರಿಯಾಗಿ ಪರೀಕ್ಷೆ ಬರೆಯಲಿಲ್ಲವೆಂದು ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸುರಪುರ ಪಟ್ಟಣದ ಹೊರಭಾಗದಲ್ಲಿರುವ ಕಾಲೇಜ್ ನವಸತಿ ಗೃಹದಲ್ಲಿ ನಡೆದಿದೆ.
ನಾರಾಯಣಪುರ ನಿವಾಸಿ ಅರುಣ ಕುಮಾರ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಇವರು 3 ನೇ ಸೆಮಿಸ್ಟರ್ ನ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಇದೀಗ ಖಾಸಗಿ ಕಾಲೇಜ್ ನ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಅರುಣ ಕುಮಾರ ಶನಿವಾರ ನಡೆದ ಡಿಎಂಎಸ್ ವಿಷಯದಲ್ಲಿ ಪರೀಕ್ಷೆಯನ್ನು ಮುಗಿಸಿ ಹಾಸ್ಟೆಲ್‍ಗೆ ಬಂದಿದ್ದಾರೆ. ಬಳಿಕ ತನ್ನ ಗೆಳೆಯರಿಗೆ ಫೋನ್ ಮಾಡಿ ನಾನು ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲವೆಂದು ನೋವಿನಿಂದ ಹೇಳಿಕೊಂಡಿದ್ದರು. ಬಳಿಕ ಮನನೊಂದು ವಸತಿ ನಿಲಯದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.