ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಲೋಕಸಭಾ ಸದಸ್ಯ, ಎಂಜಿನಿಯರ್ ರಶೀದ್ (Engineer Rashid) ಅವರ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿ (Tihar Jail) ಹಲ್ಲೆಯಾಗಿದೆ. ಕಳೆದ ವಾರ ಮಾತಿನ ಚಕಮಕಿಯ ನಂತರ ಟ್ರಾನ್ಸ್‌ಜೆಂಡರ್ ಕೈದಿಗಳು (Transgender Inmates) ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜೈಲು ಸಂಖ್ಯೆ 3ರಲ್ಲಿ ಇರಿಸಲಾಗಿರುವ ರಶೀದ್ ಅವರಿಗೆ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿವೆ. ಜೈಲಿನ ಮೂಲಗಳು ಯೋಜಿತ ಕೊಲೆ ಪಿತೂರಿಯ ಯಾವುದೇ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಅಂತಹ ವರದಿಗಳನ್ನು ಆಧಾರರಹಿತವೆಂದು ವಿವರಿಸಿವೆ. ಪ್ರಸ್ತುತ, ರಶೀದ್ ಜೊತೆಗೆ ಜೈಲು ಸಂಖ್ಯೆ 3ರಲ್ಲಿ ಕೇವಲ ಮೂವರು ಟ್ರಾನ್ಸ್‌ಜೆಂಡರ್ ಕೈದಿಗಳನ್ನು ಮಾತ್ರ ಇರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ
ರಶೀದ್ ಮತ್ತು ಟ್ರಾನ್ಸ್ಜೆಂಡರ್ ಕೈದಿಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಈ ಸಂಘರ್ಷ ಉಂಟಾಗಿದೆ ಎಂದು ವರದಿಯಾಗಿದೆ. ರಶೀದ್ ಮತ್ತು ಇತರರು ಸೇರಿದಂತೆ ಕಾಶ್ಮೀರಿ ಕೈದಿಗಳನ್ನು ಪ್ರಚೋದಿಸಲು ಮತ್ತು ಕಿರುಕುಳ ನೀಡಲು ಜೈಲು ಅಧಿಕಾರಿಗಳು ಟ್ರಾನ್ಸ್‌ಜೆಂಡರ್ ಕೈದಿಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: Viral Video | ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶ ಕಳವು
ರಶೀದ್ ಅವರ ಪಕ್ಷವಾದ ಅವಾಮಿ ಇತ್ತೆಹಾದ್ ಪಕ್ಷ (ಎಐಪಿ) ಈ ಘಟನೆಯನ್ನು ಖಂಡಿಸಿದ್ದು, ಇದು ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುವ ಉದ್ದೇಶಪೂರ್ವಕ ಪಿತೂರಿ ಎಂದು ಕರೆದಿದೆ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ. ಇದನ್ನೂ ಓದಿ: ಜೈಲಧಿಕಾರಿ ಮೇಲೆ ಹಲ್ಲೆ ನಡೆಸಿ ಇಬ್ಬರು ಕೈದಿಗಳು ಪರಾರಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ 2019ರಲ್ಲಿ ಎಂಜಿನಿಯರ್ ರಶೀದ್ ಅವರನ್ನು ಬಂಧಿಸಲಾಯಿತು. ವಿಚಾರಣೆಯ ಹಂತದಲ್ಲಿದ್ದರೂ, ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಟ್ರಂಪ್ ಸಕಾರಾತ್ಮಕ ನಡೆ ಶ್ಲಾಘನೀಯ: ಮೋದಿ