Mandya | ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ

Public TV
1 Min Read
Mandya Maddur Engineer Suicide

ಮಂಡ್ಯ: ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಎಂಜಿನಿಯರ್ (Engineer) ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಕುರುಬರದೊಡ್ಡಿ (Kurubaradoddi) ಗ್ರಾಮದಲ್ಲಿ ನಡೆದಿದೆ.

ಜ್ಞಾನೇಶ್ (30) ಮೃತ ಎಂಜಿನಿಯರ್. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮತ್ತಿ ಗ್ರಾಮದ ನಿವಾಸಿಯಾದ ಈತ ಕಳೆದ ಹಲವು ವರ್ಷಗಳಿಂದ ಕೆಸ್ತೂರು ಗ್ರಾಮದಲ್ಲಿ ವಾಸವಾಗಿದ್ದ. ಇದನ್ನೂ ಓದಿ: ಟೆಕ್ಕಿ ಅತುಲ್ ಪತ್ನಿಗೆ ಖಾಕಿ ನೋಟಿಸ್ – 3 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗದಿದ್ರೆ ಬಂಧನ ಸಾಧ್ಯತೆ

ಮೃತ ಜ್ಞಾನೇಶ್ ಶಿಂಷಾ ಏತ ನೀರಾವರಿ ಯೋಜನೆಯನಲ್ಲಿ ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ʼWork Pressureʼ ಎಂದು ಹಾಕಿಕೊಂಡಿದ್ದ. ಈ ಹಿನ್ನೆಲೆ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಿವಿ ಗಡಚಿಕ್ಕುವಂತೆ ಲೌಡ್‌ ಸ್ಪೀಕರ್‌ ಬಳಸಿದ್ದಕ್ಕೆ ಮಸೀದಿಗೆ ಬಿತ್ತು 2 ಲಕ್ಷ ದಂಡ

Share This Article