ಇಸ್ಲಾಮಾಬಾದ್: ಮದುವೆಗೂ ಮುನ್ನವೇ ಜೊತೆಯಾಗಿ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಭಾವಿ ಅಳಿಯ ಹಾಗೂ ಮಗಳನ್ನು ಆಕೆಯ ತಂದೆಯೇ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
ಮರೀನಾ ಹಾಗೂ ಸಲ್ಮಾನ್ ಮೃತ ದುರ್ದೈವಿಗಳು. ಕಸ್ಭಾ ಕಾಲೋನಿಯ ಮರೀನಾ ಹಾಗೂ ಕರಾಚಿಯ ಸಲ್ಮಾನ್ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಇಬ್ಬರೂ ಮದುವೆಗೂ ಮುನ್ನ ಪರಸ್ಪರ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದನ್ನು ಕಂಡ ಮರೀನಾ ತಂದೆ ಮದುವೆಗೂ ಮುನ್ನ ಮಗಳು-ಅಳಿಯ ಪರಸ್ಪರ ಭೇಟಿಯಾಗುವುದಲ್ಲದೇ, ಸೆಲ್ಫಿ ತೆಗೆದುಕೊಂಡು ನಮ್ಮ ಸಂಪ್ರದಾಯನವನ್ನು ಮೀರಿದ್ದಾರೆಂದು ಕೋಪಗೊಂಡಿದ್ದರು. ನಂತರ ಸಲ್ಮಾನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿ, ಮಗಳಿಗೆ ವಿಷವುಣಿಸಿ ಸಾಯಿಸಿದ್ದ. ಅಲ್ಲದೇ ಮಗಳ ಸಾವನ್ನು ಆತ್ಮಹತ್ಯೆಯಂದು ಬಿಂಬಿಸಿ ಅಂತ್ಯಕ್ರಿಯೆ ನೆರವೇರಿಸಿದ್ದ.
ಇದರಿಂದ ಅನುಮಾನಗೊಂಡ ಮರೀನಾ ತಾಯಿ ಪೊಲೀಸರಿಗೆ ಗಂಡನ ವಿರುದ್ಧವೇ ದೂರು ನೀಡಿದ್ದರು. ಪೊಲೀಸರು ಮರೀನಾ ತಂದೆಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಸಂಪ್ರದಾಯವನ್ನು ಮುರಿದಿದ್ದರಿಂದ ಕೊಲೆ ಮಾಡಿರುವುದಾಗಿ ತಂದೆ ಒಪ್ಪಿಕೊಂಡಿದ್ದಾನೆ. ಅಲ್ಲದೇ ಕೊಲೆಗೆ ಸಹಕರಿಸಿದ ಮರೀನಾ ತಾತಾರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv