ಲಂಡನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಡಿಸಿದ ಸಿಕ್ಸರ್ ಒಂದು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಬಾಲಕಿ ಮೀರಾ ಸಾಲ್ವಿ ಮೇಲೆ ಬಿದ್ದು ಗಾಯವಾಗಿತ್ತು. ಆ ಬಳಿಕ ರೋಹಿತ್ ನಡೆದುಕೊಂಡ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದ ರೋಹಿತ್ ಶರ್ಮಾ ಬ್ಯಾಟ್‍ನಿಂದ ಬೌಂಡರಿ, ಸಿಕ್ಸರ್‌ಗಳು ಸಿಡಿಯುತ್ತಿತ್ತು. ರೋಹಿತ್ ಸಿಡಿಸಿದ ಹುಕ್ ಶಾಟ್ ಒಂದು ಮೈದಾನದಲ್ಲಿ ಅಪ್ಪನೊಂದಿಗೆ ಕೂತು ಪಂದ್ಯ ನೋಡುತ್ತಿದ್ದ ಮೀರಾ ಸ್ವಾಲಿಗೆ ನೇರವಾಗಿ ತಗುಲಿತ್ತು. ಬಳಿಕ ಸ್ವಾಲಿಗೆ ಮೈದಾನದಲ್ಲಿದ್ದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರು. ಇದರಿಂದ ಚೇತರಿಕೆ ಕಂಡು ಸಾಲ್ವಿ ತಂದೆಯೊಂದಿಗೆ ಪಂದ್ಯ ವೀಕ್ಷಿಸಿದಳು. ಪಂದ್ಯದ ಬಳಿಕ ಸ್ವತಃ ರೋಹಿತ್ ಶರ್ಮಾ, ಸಾಲ್ವಿ ಬಳಿ ಹೋಗಿ ಚಾಕಲೇಟ್ ಮತ್ತು ಗೊಂಬೆಯೊಂದನ್ನು ನೀಡಿ ಆರೋಗ್ಯ ವಿಚಾರಿಸಿದರು. ಸಾಲ್ವಿ ನಗುತ್ತಲೇ ಹಿಟ್‍ಮ್ಯಾನ್ ನೀಡಿದ ಉಡುಗೊರೆಯನ್ನು ಸ್ವೀಕರಿಸಿದಳು. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ – ಕೊಹ್ಲಿಗಿಲ್ಲ ಸ್ಥಾನ, ರಾಹುಲ್‍ಗೆ ಷರತ್ತು!
Advertisement
https://twitter.com/cricketapna1/status/1547080336869171201
Advertisement
ಈ ವೇಳೆ ರೋಹಿತ್ ಶರ್ಮಾ, ಸಾಲ್ವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸುವಂತೆ ಸಾಲ್ವಿ ತಂದೆಗೆ ಸಲಹೆ ನೀಡಿ ಅವರ ಫೋನ್ ನಂಬರ್ ಪಡೆದುಕೊಂಡಿದ್ದರು. ಆ ಬಳಿಕ ರೋಹಿತ್ ಸಾಲ್ವಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದೀಗ ರೋಹಿತ್ ಶರ್ಮಾರ ಈ ನಡೆಯನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರೋಹಿತ್‍ರನ್ನು ಗುಣಗಾನ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಬೆಂಕಿ ಬೌಲಿಂಗ್ ಇದೀಗ ಬುಮ್ರಾ ಏಕದಿನ ಕ್ರಿಕೆಟ್‌ನ ನಂ.1 ಬೌಲರ್
Advertisement
ಸಾಲ್ವಿ ಈಗ ಚೇತರಿಕೆ ಕಂಡಿದ್ದು, ಸಾಲ್ವಿ ಆರೋಗ್ಯವನ್ನು ಇಂಗ್ಲೆಂಡ್ ತಂಡ ಕೂಡ ವಿಚಾರಿಸಿ ಆಕೆಗೆ ಇಂಗ್ಲೆಂಡ್ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದೆ.