ಬೆಂಗಳೂರು: ಬಿಎಂಟಿಸಿ (BMTC) ನೌಕರರ (Workers) ಕುಟುಂಬಕ್ಕೆ ಸಾರಿಗೆ ಇಲಾಖೆ (Transportation Department) ಗುಡ್‌ನ್ಯೂಸ್ ಕೊಟ್ಟಿದೆ. ಇನ್ನುಮುಂದೆ ಕೆಎಸ್‌ಆರ್‌ಟಿಸಿ (KSRTC) ಮಾದರಿಯಲ್ಲೇ ಬಿಎಂಟಿಸಿ ನೌಕರರಿಗೂ 1 ಕೋಟಿ ರೂ. ಅಪಘಾತ ವಿಮೆ (Accident Insurance) ಸಿಗಲಿದೆ.
ಇಂದಿನಿಂದಲೇ (ಫೆ.19) ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ನೀಡಲಾಗಿದೆ. ಬಿಎಂಟಿಸಿಯ 28,000 ನೌಕರರ ಕುಟುಂಬಗಳಿಗೆ ಈ ಸೌಲಭ್ಯ ಲಭಿಸಲಿದೆ. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ
Advertisement
Advertisement
ಈ ಮೊದಲು ಬಿಎಂಟಿಸಿ ನೌಕರರಿಗೆ ಕೇವಲ 3 ಲಕ್ಷ ರೂ. ಪರಿಹಾರವಿತ್ತು. ಇನ್ನುಮುಂದೆ ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿರುವಾಗಲೂ ಸಂಭವಿಸುವ ಅಪಘಾತಕ್ಕೆ 1.15 ಕೋಟಿ ರೂ. ಪರಿಹಾರ ಸಿಗಲಿದೆ. ಅಲ್ಲದೇ ಸಿಬ್ಬಂದಿ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂ. ಪರಿಹಾರ ದೊರೆಯಲಿದೆ. ಇದನ್ನೂ ಓದಿ: ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್
Advertisement