ಮುಂಬೈ: ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶಾದ್ಯಂತ ವಿವಿಧೆಡೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ED) (Enforcement Directorate) ಒಟ್ಟು 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸೀಜ್ ಮಾಡಿದೆ.
Advertisement
ಕಳೆದ ಕೆಲ ದಿನಗಳ ಹಿಂದೆ ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ವಂಚನೆ ಮಾಡುತ್ತಿದ್ದ ಕೋಲ್ಕತ್ತಾದ ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಬರೋಬ್ಬರಿ 17 ಕೋಟಿ ರೂ. ವಶಪಡಿಕೊಂಡಿತ್ತು. ಈ ಮೊದಲು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ಮನೆ ಮೇಲೆ ದಾಳಿ ನಡೆಸಿ 50 ಕೋಟಿ ರೂ.ಗೂ ಅಧಿಕ ಮೊತ್ತ ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಬ್ಯಾಂಕ್ ಖಾತೆಯಿಂದ ಹೆಂಡತಿಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ನಾಪತ್ತೆಯಾದ ಬ್ಯಾಂಕ್ ಸಿಬ್ಬಂದಿ
Advertisement
Advertisement
ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇ.ಡಿ ದಾಳಿ ನಡೆಸಿದ ವೇಳೆ ಹಣ ಎಣಿಕೆಗಾಗಿ 24 ಗಂಟೆಗಳನ್ನು ಇ.ಡಿ ಅಧಿಕಾರಿಗಳು ತೆಗೆದುಕೊಂಡಿದ್ದರು. ಅಷ್ಟರ ಮಟ್ಟಿಗೆ ನೋಟಿನ ಕಂತೆ ಸಿಕ್ಕಿತ್ತು. ಇದನ್ನೂ ಓದಿ: ಅಪ್ಘಾನಿಸ್ತಾನದಲ್ಲಿ ಆನ್‌ಲೈನ್ ಶಾಪಿಂಗ್ ಸ್ಥಗಿತ
Advertisement
ಇ.ಡಿ ವಶಪಡಿಕೊಂಡ ಹಣ ಏನ್ ಮಾಡುತ್ತೆ:
ಇ.ಡಿ ನಿಯಮದ ಪ್ರಕಾರ ವಶಪಡಿಸಿಕೊಂಡ ಹಣವನ್ನು ತಮ್ಮ ಬಳಿ ಇರಿಸಿಕೊಳ್ಳುವಂತಿಲ್ಲ. ಇ.ಡಿಯು ನಗದನ್ನು ವಶಪಡಿಸಿಕೊಂಡ ಬಳಿಕ ಆರೋಪಿಗೆ ನಗದು ಮೂಲವನ್ನು ವಿವರಿಸಲು ಅವಕಾಶವನ್ನು ನೀಡಲಾಗುತ್ತದೆ. ಇದಾದ ಬಳಿಕ ತನಿಖಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೆ ಇದ್ದರೆ ನಗದನ್ನು ಅಕ್ರಮವಾಗಿ ಗಳಿಸಿದ ಹಣ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಮದರಸಾದಲ್ಲಿ ಮರ್ಡರ್ – ಬಾಲಕನನ್ನು ಕೊಂದ ಮತ್ತೋರ್ವ ವಿದ್ಯಾರ್ಥಿ ಬಂಧನ
ಒಮ್ಮೆ ಹಣವನ್ನು ಸೀಲ್ ಮಾಡಿದರೆ ಮತ್ತು ಜಪ್ತಿ ಮೆಮೋ ಸಿದ್ಧಪಡಿಸಿದರೆ, ವಶಪಡಿಸಿಕೊಂಡ ಹಣದ ಪೆಟ್ಟಿಗೆಯನ್ನು ಆ ರಾಜ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇ.ಡಿಯ ವೈಯಕ್ತಿಕ ಠೇವಣಿ (ಪಿಡಿ) ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಅಂದರೆ ನಗದನ್ನು ಕೇಂದ್ರ ಸರ್ಕಾರದ ಖಜಾನೆಯಲ್ಲಿ ಜಮೆ ಮಾಡಲಾಗುತ್ತದೆ.
ವಶಪಡಿಸಿಕೊಂಡ ಹಣವನ್ನು ಜಾರಿ ನಿರ್ದೇಶನಾಲಯ ಬಳಸುವುದಿಲ್ಲ. ಇದಲ್ಲದೇ ಬ್ಯಾಂಕ್ ಅಥವಾ ಸರ್ಕಾರವು ಬಳಸುವಂತಿಲ್ಲ. ಹಣದ ಮೌಲ್ಯಗಳ ಸೂಕ್ತ ಲೆಕ್ಕಾಚಾರವನ್ನು ದೃಢಪಡಿಸಿದ ನಂತರ, ಪ್ರಕರಣ ವಿಚಾರಣೆ ಮುಗಿಯುವವರೆಗೆ ಹಣವನ್ನು ಬ್ಯಾಂಕ್‍ನಲ್ಲಿ ಇರಿಸಲಾಗುತ್ತದೆ. ಆರೋಪಿಗೆ ಶಿಕ್ಷೆಯಾದರೆ, ನಗದು ಮೊತ್ತವು ಕೇಂದ್ರದ ಆಸ್ತಿಯಾಗುತ್ತದೆ. ಆರೋಪಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿದರೆ, ನಗದನ್ನು ಹಿಂತಿರುಗಿಸಲಾಗುತ್ತದೆ.