ರಾಯಚೂರು: ಮಹರ್ಷಿ ವಾಲ್ಮೀಕಿ ನಿಗಮದ (Valmiki Case) 187 ಕೋಟಿ ರೂಪಾಯಿ ಹಗರಣದ ಪ್ರಕರಣ ಹಿನ್ನೆಲೆ ಇ.ಡಿ ಬಂಧನ ಭೀತಿಯಲ್ಲಿರುವ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ (Raichuru) ಆಗಮಿಸಿ ಬೆಳಗ್ಗೆಯೇ ನಗರದಿಂದ ಕಾಲ್ಕಿತ್ತಿದ್ದಾರೆ.
ಬೆಳಗ್ಗೆ ಯಾರನ್ನೂ ಭೇಟಿಯಾಗದೆ ಮನೆಯಿಂದ ಅವಸರಲ್ಲಿ ಕಾರು ಹತ್ತಿ ಪ್ರಯಾಣ ಮಾಡಿದ್ದಾರೆ. ಮಾಧ್ಯಮದವರಿಂದ ತಪ್ಪಿಸಿಕೊಂಡು ವೇಗವಾಗಿ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಮಂತ್ರಾಲಯ ರಸ್ತೆ ಮಾರ್ಗವಾಗಿ ಬೆಂಗಳೂರು ಕಡೆಗೆ ತಮ್ಮ ಆಪ್ತರ ಜೊತೆ ಹೊರಟಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ ಕೇಸ್: 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಹೇಗೆ? ಇಂಚಿಂಚು ಮಾಹಿತಿ ಬಿಚ್ಚಿಟ್ಟ ED!
- Advertisement
ಮಾರ್ಗಮಧ್ಯೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೆಸುಗೂರಿನಲ್ಲಿ ಕೆಲ ಕಾರ್ಯಕರ್ತರನ್ನ ಭೇಟಿಯಾಗಿ ಮುಂದೆ ತೆರಳಿದ್ದಾರೆ. ತಮ್ಮ ಕಾರನ್ನ ಬಿಟ್ಟು ಕಾರ್ಯಕರ್ತನ ಕ್ರೇಟಾ ಕಾರ್‌ನಲ್ಲಿ ಬಸನಗೌಡ ದದ್ದಲ್ (Basanagouda Daddal) ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
- Advertisement
ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ದದ್ದಲ್‌ಗೆ ಈಗಾಗಲೇ ಜಾರಿ ನಿರ್ದೇಶನಾಲಯ (Enforcement Directorate) ನೋಟಿಸ್ ನೀಡಿದೆ. ಇ.ಡಿ ಬಂಧನ ಭೀತಿಯಲ್ಲಿರುವ ಶಾಸಕರಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರರನ್ನು ಬಂಧಿಸಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದು: ಪರಮೇಶ್ವರ್