ನವದೆಹಲಿ: ಅಕ್ರಮ ಹಣ ವರ್ಗಾವಣೆ (Enforcement Directorate) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ (Anil Deshmukh) ಅವರ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ಅನುಮತಿ ನೀಡಿದೆ.
ದೇಶಮುಖ್ ಅವರಿಗೆ ನೀಡಲಾದ ಜಾಮೀನು ಅಕ್ಟೋಬರ್ 13ಕ್ಕೆ ಜಾರಿಗೆ ಬರಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ (UU Lalit) ನೇತೃತ್ವದ ಪೀಠದ ಮುಂದೆ ಹಣಕಾಸು ತನಿಖಾ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣವನ್ನು ಪ್ರಸ್ತಾಪಿಸಿದರು. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠದ ಮುಂದೆ ಪ್ರಕರಣವನ್ನು ನಾಳೆ ಪಟ್ಟಿ ಮಾಡುವಂತೆ ಪೀಠವು ಸೂಚಿಸಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ
ಅಕ್ಟೋಬರ್ 4 ರಂದು ಅನಿಲ್ ದೇಶಮುಖ್ ಅವರಿಗೆ ಬಾಂಬೆ ಹೈಕೋರ್ಟ್ (Bombay High Court) ಜಾಮೀನು ನೀಡಿತ್ತು. ಆದರೆ ಇಡಿಗಳ ಕೋರಿಕೆಯ ಮೇರೆಗೆ ಆದೇಶವನ್ನು ಅಕ್ಟೋಬರ್ 12 ರವರೆಗೆ ತಡೆಹಿಡಿಯಲಾಯಿತು. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆಗೆ – ಆನ್‍ಲೈನ್ ಜ್ಯೋತಿಷಿ ನಂಬಿ ಲಕ್ಷಗಟ್ಟಲೆ ಹಣ ಕಳ್ಕೊಂಡ ಮಹಿಳೆ
ಕಳೆದ ವರ್ಷ ನವೆಂಬರ್‌ನಲ್ಲಿ ಇಡಿ ದಾಖಲಿಸಿದ್ದ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಅನ್ವೇಷಣೆಯ ಮಧ್ಯೆ ಅವರು ತಮ್ಮ ಜಾಮೀನು ಅರ್ಜಿಯ ವಿಚಾರಣೆಯ ವಿಳಂಬವು ತನಗೆ ಪೂರ್ವಾಗ್ರಹವನ್ನು ಉಂಟುಮಾಡುತ್ತಿದೆ ಎಂದು ಹೇಳಿದಾಗ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಇದಾದ ಬಳಿಕ ಅವರ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್‍ಗೆ ಸೂಚಿಸಿತ್ತು.