ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ವಿಧಾನ ಸೌಧದಲ್ಲಿ ಆಯೋಜಿಸಿದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಇಂಧನ ಸಚಿವ ಡಿಕೆ ಶಿವಕುಮಾರ್ ಸ್ವಲ್ಪ ತಡವಾಗಿ ಬಂದರು. ಬಂದವರೇ ವೇದಿಕೆ ಮೇಲಿದ್ದ ಸ್ವಾಮೀಜಿಗಳ ಕಾಲಿಗೆ ಬಿದ್ದು ನಮಸ್ಕರಿಸಿದರು. ಇದೇ ವೇಳೆ ಸ್ವಾಮೀಜಿ ಪಕ್ಕ ಕುಳಿತಿದ್ದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರನ್ನು ಸಹ ಕಾಲು ಮುಟ್ಟಿ ಆಶೀರ್ವಾದ ಪಡೆದರು.
ಇದಕ್ಕೆ ಮೃದುವಾಗಿಯೇ ಪ್ರತಿಕ್ರಿಯಿಸಿದ ದೇವೇಗೌಡರು ತಲೆಮುಟ್ಟಿ ನಕ್ಕು ಆಶೀರ್ವದಿಸಿ ಹಸ್ತಲಾಘವ ನೀಡಿದರು. ಈ ಬೆಳವಣಿಗೆ ಮುಂದಿನ ಚುನಾವಣೆಗೆ ಒಕ್ಕಲಿಗ ನಾಯಕರನ್ನ ಒಂದಾಗತ್ತಾರ ಅನ್ನೋ ಲೆಕ್ಕಾಚಾರಗಳು ಈಗ ಪ್ರಾರಂಭವಾಗಿದೆ.