ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಕು ತಂಪಾದ ದ್ರವ ಪದಾರ್ಥಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಅವುಗಳಲ್ಲಿ ಜ್ಯೂಸ್, ಮನೆಯಲ್ಲಿ ತಯಾರಿಸುವ ಪಾನೀಯಗಳು ಹಾಗೂ ಎನರ್ಜಿ ಡ್ರಿಂಕ್ ದೇಹಕ್ಕೆ ತಂಪನ್ನು ನೀಡುತ್ತವೆ.
ಎನರ್ಜಿ ಡ್ರಿಂಕ್ ಗಳು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಂಪನ್ನು ಕೂಡ ನೀಡುತ್ತದೆ. ಹೆಚ್ಚಾಗಿ ಎನರ್ಜಿ ಡ್ರಿಂಕ್ ಹೆಚ್ಚಾಗಿ ವ್ಯಾಯಾಮ ಅಥವಾ ಯೋಗ ಮಾಡುವವರು ದೇಹಕ್ಕೆ ಶಕ್ತಿ ನೀಡಬೇಕು ಯನ್ನುವ ಉದ್ದೇಶದಿಂದ ಸೇವಿಸುತ್ತಾರೆ.
ಈ ಎನರ್ಜಿ ಡ್ರಿಂಕ್ ಗಳು ಕೆಫಿನ್, ಸಕ್ಕರೆ, ವಿಟಮಿನ್ ಬಿ ಸೇರಿದಂತೆ ಇನ್ನಿತರ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳಿಂದ ದೇಹಕ್ಕೆ ಕಡಿಮೆ ಸಮಯದಲ್ಲಿ ಶಕ್ತಿ ನೀಡುತ್ತದೆ ಆದರೆ ಇದು ದೇಹಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ.
ಇತ್ತೀಚಿಗೆ ಅಮೆರಿಕಾದಲ್ಲಿ 28 ವರ್ಷದ ಯುವತಿ ಎನರ್ಜಿ ಡ್ರಿಂಕ್ ಸೇವಿಸಿ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದರು. ಆದರೆ ಈ ಕುರಿತು ವೈದ್ಯರ ಮಾಹಿತಿಯ ಪ್ರಕಾರ ಕೆಲವೊಮ್ಮೆ ವ್ಯಾಯಾಮಕ್ಕೂ ಮುನ್ನ ಎನರ್ಜಿ ಡ್ರಿಂಕ್ ಸೇವಿಸುವುದು ಹೆಚ್ಚಿನ ಜನರಲ್ಲಿ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಒಂದು ಎನರ್ಜಿ ಡ್ರಿಂಕ್ ನಲ್ಲಿ ಪ್ರತಿ ಕ್ಯಾನ್ ಗೆ 80 ಮಿಲಿ ಗ್ರಾಂ ನಿಂದ 500 ಮಿಲಿ ಗ್ರಾಂ ನಷ್ಟು ಇರುವ ಸಾಧ್ಯತೆಗಳಿರುತ್ತದೆ. ಅಂದರೆ ಅಂದಾಜು ನೂರು ಮಿಲಿ ಗ್ರಾಂ ಕೆಫಿನ್ ಹೊಂದಿರುವ ಕಾಫಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇನ್ನು ಎನರ್ಜಿ ಡ್ರಿಂಕ್ ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಸಕ್ಕರೆ ಅಥವಾ ಕೃತಕ ಸಿಹಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.
ಅಮೇರಿಕನ್ ಹಾರ್ತ್ ಅಸೋಸಿಯೇಷನ್ ನಡೆಸಿದ ಅಧ್ಯಯನದ ಪ್ರಕಾರ, 900 ಮಿಲಿ ಎನರ್ಜಿ ಡ್ರಿಂಕ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಗಮನಾರ್ಹವಾಗಿ ಏರಿಕೆಯಾಗುತ್ತದೆ. ಇದರಿಂದ ಹೃದಯದ ಚಟುವಟಿಕೆಗಳಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಕೆಫೀನ್ ಹಾಗೂ ಇನ್ನಿತರ ಅಂಶಗಳನ್ನು ಹೊಂದಿರುವ ಎನರ್ಜಿ ಡ್ರಿಂಕ್ ಸೇವಿಸಿದಾಗ ಹೃದಯ ಬಡಿತ ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಜೊತೆಗೆ ಶ್ವಾಸಕೋಶದ ಕಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ.
ಸಕ್ಕರೆಯ ಅಧಿಕ ಸೇವನೆಯಿಂದ ತೂಕ ಹೆಚ್ಚಾಗುವುದು, ಮಧುಮೇಹ ಸಮಸ್ಯೆ, ಗಂಭೀರ ವೈದ್ಯಕೀಯ ಸ್ಥಿತಿಗಳಿಗೆ ಕಾರಣ, ಇನ್ನಿತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.