ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇರೋ ರಾಜಕಾಲುವೆಯನ್ನ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದವರ ನಿದ್ದೆ ಮತ್ತೆ ಕೇಡುತ್ತಿದೆ. ಕಳೆದ ತಿಂಗಳು ಕಾಟಚಾರಕ್ಕೆ ಒತ್ತುವರಿ ತೆರವು ಮಾಡಿದ್ದ ಬಿಬಿಎಂಪಿ (BBMP)ಗೆ ಹೈಕೋರ್ಟ್ (HighCourt) ತರಾಟೆ ತೆಗೆದುಕೊಂಡ್ಮೇಲೆ ಮತ್ತೆ ನಿನ್ನೆಯಿಂದ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡ್ತಿದೆ. ಆಪರೇಷನ್ ಬುಲ್ಡೋಜರ್ 2.0 ನ ಸೆಕೆಂಡ್ ಡೇ ಇವತ್ತು ಯಾವ ಯಾವ ಕಡೆ ಜೆಸಿಬಿ (JCB) ಸದ್ದು ಮಾಡಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ ನೋಡಿ.
Advertisement
ಹೌದು. ಬಿಬಿಎಂಪಿ ಮತ್ತೆ ರಾಜಕಾಲುವೆಯ ಒತ್ತುವರಿ ಕಾರ್ಯಾಚರಣೆಯನ್ನ ನಿನ್ನೆಯಿಂದ ಶುರು ಮಾಡಿದೆ. ದಸರಾ ಹಬ್ಬದ ಬಳಿಕ ರಾಜಕಾಲುವೆಯನ್ನ ಅತಿಕ್ರಮಣ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿತ್ತು. ನಿನ್ನೆಯಿಂದ ಸಿಲಿಕಾನ್ ಸಿಟಿಯ ಮಹಾದೇವಪುರ ಮತ್ತು ಕೆ.ಆರ್ ಪುರಂ ವಲಯದಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡಿದ್ರು. ಇಂದು, ನಿನ್ನೆ ಅರ್ಧಕ್ಕೆ ಬಿಟ್ಟಿದ್ದ ಜಾಗಗಳಲ್ಲಿ ಒತ್ತುವರಿ ತೆರವು ಮುಂದುವರಿಸಿದ್ರು.
Advertisement
Advertisement
ಕೆ.ಆರ್ ಪುರಂ ಬಳಿಯ ಎಸ್‍ಆರ್ ಲೇಔಟ್‍ನಲ್ಲಿ ನಿನ್ನೆ ಒಂದು ಭಾಗದಲ್ಲಿ ಕಾಲುವೆ ತೆರವು ಮಾಡಿದ್ದ ಬಿಬಿಎಂಪಿ ಇವತ್ತು ಮನೆಗಳ ಕಡೆ ತೆರವು ನಡೆಸ್ತು. ಈಗಾಗಲೇ 15ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್ ನೀಡಿ, ಬಿಬಿಎಂಪಿ ಮಾರ್ಕಿಂಗ್ ಮಾಡಿತ್ತು. ಮನೆ ಮಾಲೀಕರು ನಾವೇ ಮಾರ್ಕಿಂಗ್ ಆಗಿರುವಷ್ಟು ಕಟ್ಟಡ ತೆರವು ಮಾಡುತ್ತೇವೆ ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ಊಟ, ತಿಂಡಿ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ 63ರ ವೃದ್ಧನಿಂದ ಅತ್ಯಾಚಾರ
Advertisement
ಇನ್ನೂ ಮಹಾದೇವಪುರ ವಲಯದಲ್ಲೂ ಜಿಸಿಬಿಗಳ ಸದ್ದು ಕೇಳಿ ಬಂತು. ಮಹಾದೇವಪುರ ವಲಯದ ಶೀಲವಂತ ಕೆರೆ ಬಳಿಯ ಸ್ಕೈ ಲಾರ್ಕ್ ಅಪಾರ್ಟ್ ಮೆಂಟ್‍ನವರು ರಾಜಕಾಲುವೆಯನ್ನ ಒತ್ತುವರಿ ಮಾಡಿಕೊಂಡಿದ್ರು. ಕಾಂಕ್ರೀಟ್ ಸ್ಲಾಬ್ ಹಾಕಿ ರಾಜಕಾಲುವೆಯನ್ನ ಮುಚ್ಚಲಾಗಿತ್ತು. ಸುಮಾರು 300 ಮೀಟರ್ ಉದ್ದದವರೆಗೆ ಬುಲ್ಡೋಜರ್‍ಗಳ ಮೂಲಕ ರಾಜಕಾಲುವೆ (Rajakaluve) ಮೇಲೆ ಹಾಕಿದ್ದ ಸ್ಲಾಬ್ ತೆರವು ಮಾಡಲಾಯ್ತು.
ಇನ್ನೂ ನಾಳೆಯೂ ರಾಜಕಾಲುವೆ ಒತ್ತುವರಿ ತೆರವು ಮುಂದುವರಿಯಲಿದೆ. ಸಾರ್ವಜನಿಕರು ತಮಗೆ ತಿಳಿದೋ ತಿಳಿಯದೆಯೋ ಮಾಡಿರೋ ತಪ್ಪಿಗೆ ಕಣ್ಮುಂದೆಯೇ ಮನೆ ಕೆಡುವುದನ್ನ ನೋಡಿ ಕಣ್ಣೀರಿಡುತ್ತಿದ್ದಾರೆ.