ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ವಲಯದಲ್ಲಿ ಉಗ್ರರ ಹಾಗೂ ಸೈನಿಕರ ನಡುವಿನ ಸಂಘರ್ಷ ಮುಂದುವರೆದಿದ್ದು, ಶುಕ್ರವಾರ ಇಬ್ಬರು ಉಗ್ರರರನ್ನು ಎನ್‍ಕೌಂಟರ್ ಮಾಡಲಾಗಿದೆ.
ಪುಲ್ವಾಮಾ ವಲಯದ ಲಿಟ್ಟರ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಪಡೆದ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
Advertisement
ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಸೈನಿಕ ವಿರುದ್ಧ ಮರುದಾಳಿಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈನಿಕರ ಗುಂಡಿಗೆ ವಾಸಿಂ ಷಾ ಮತ್ತು ಹಫಿಜ್ ನಿಸಾರ್ ಎಂಬ ಇಬ್ಬರು ಉಗ್ರರು ಹತರಾಗಿದ್ದು, ಈ ಇಬ್ಬರು ಲಷ್ಕರ್-ಇ-ತೊಯ್ಬಾ ಉಗ್ರಗಾಮಿಗಳಾಗಿದ್ದರು. ಹಲವು ಭಯೋತ್ಪಾದನ ಕೃತ್ಯಗಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಕಾರ್ಯಾಚರಣೆಯನ್ನು ಮುಂದುವರೆದಿರುವುದಾಗಿ ಮಾಹಿತಿ ಲಭಿಸಿದೆ.
Advertisement
ಈ ಹಿಂದೆ ಆಗಸ್ಟ್ 28 ರಂದು ಪುಲ್ವಾಮಾ ಪ್ರದೇಶದಲ್ಲಿ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು, ಈ ಸಮಯದಲ್ಲಿ ಮನೆಯಲ್ಲಿ ಅಡಗಿ ಕುಳಿತ ಉಗ್ರರನ್ನು ಎನ್‍ಕೌಂಟರ್ ಮಾಡಲು ನಡೆದ ಕಾರ್ಯಾಚರಣೆಯಲ್ಲಿ 3 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ಭಾರತದ 8 ರಕ್ಷಣಾ ಪೊಲೀಸರು ದಾಳಿಯಲ್ಲಿ ಹುತಾತ್ಮರಾಗಿದ್ದರು.
Advertisement
ಭಾರತದ ಸೈನಿಕರು ಹೆಚ್ಚು ಪ್ರಮಾಣದಲ್ಲಿ ಹುತಾತ್ಮರಾಗಲು ಪ್ರಮುಖ ಕಾರಣವೇನೆಂದರೆ, ಉಗ್ರರು ಅಡಗಿ ಕುಳಿತ ಕಟ್ಟಡದಲ್ಲಿ ನಾಗರೀಕರು ವಾಸಿಸುತ್ತಿದ್ದರು. ಹೀಗಾಗಿ ಅವರನ್ನು ಕಾರ್ಯಾಚರಣೆಯ ವೇಳೆ ಸ್ಥಳದಿಂದ ಹೊರತರುವ ಸಂದರ್ಭದಲ್ಲಿ ಉಗ್ರರು ದಾಳಿಯನ್ನು ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಧೀಕ್ಷಕ ವೈದ್ ತಿಳಿಸಿದ್ದರು.
Advertisement
Pulwama(J&K): 1 AK-47, 1 AK-56 and 6 AK magazine recovered by security forces
— ANI (@ANI) October 14, 2017
Terrorist Wasim Shah was involved in many cases and recruitment, his elimination is a huge success : J&K DGP SP Vaid on #Pulwama encounter pic.twitter.com/nFZxZ4g5Te
— ANI (@ANI) October 14, 2017
Two terrorists Wasim Shah and Hafiz Nisar gunned down by security forces in an encounter in J&K's Pulwama (visuals deferred) pic.twitter.com/fHIUfyjW13
— ANI (@ANI) October 14, 2017