ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ರಾಜೌರಿ (Rajouri) ಜಿಲ್ಲೆಯ ಬರಿಯಾಮ ಪ್ರದೇಶದಲ್ಲಿ ಭಯೋತ್ಪಾದಕರು (Terrorists) ಮತ್ತು ಭದ್ರತಾ ಪಡೆಗಳ (Security Force) ನಡುವೆ ಎನ್‌ಕೌಂಟರ್ (Encounter) ನಡೆದಿದ್ದು, ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಕೂಡಾ ಎನ್‌ಕೌಂಟರ್‌ನಲ್ಲಿ ತೊಡಗಿದ್ದು, ಘಟನಾ ಪ್ರದೇಶವನ್ನು ಭಾರತೀಯ ಸೇನೆ ಸುತ್ತುವರೆದಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಆನ್‌ಲೈನ್‌ನಲ್ಲೇ ಪಾಕಿಸ್ತಾನದ ವಧುವನ್ನು ವರಿಸಿದ ರಾಜಸ್ಥಾನದ ವರ
ಶನಿವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಖಾವಸ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದ್ದು, ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತ್ಯೆಯಾಗಿದ್ದಾನೆ. ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್ನಲ್ಲೂ ನಡುಗಿದ ಭೂಮಿ
Web Stories