ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ (Emraan Hashmi) ‘ಗೂಢಚಾರಿ 2’ (Goodachari 2) ಸೆಟ್‌ನಲ್ಲಿ ಪೆಟ್ಟಾಗಿದೆ. ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಕುತ್ತಿಗೆಗೆ ಪೆಟ್ಟಾಗಿದ್ದು, ನಟನಿಗೆ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ:Bigg Boss 18: ಸ್ಪರ್ಧಿಯಾಗಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಕತ್ತೆ
View this post on Instagram
ತೆಲುಗಿನ ‘ಗೂಢಚಾರಿ 2’ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಇಮ್ರಾನ್ ಹಶ್ಮಿ ಕೂಡ ಚಿತ್ರತಂಡ ಸೇರಿಕೊಂಡಿದ್ದರು. ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ ಜಂಪ್ ಮಾಡುವ ವೇಳೆ, ಇಮ್ರಾನ್ ಕುತ್ತಿಗೆಗೆ ಗಾಯವಾಗಿದೆ. ಕೂಡಲೇ ಚಿತ್ರೀಕರಣ ನಿಲ್ಲಿಸಿ ನಟನಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಇಮ್ರಾನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಇಮ್ರಾನ್‌ಗೆ ಗಾಯವಾಗಿರುವ ಫೋಟೋ ನೋಡಿ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.
ಅಂದಹಾಗೆ, ಮೊದಲ ಬಾರಿಗೆ ‘ಗೂಢಚಾರಿ 2’ ಸಿನಿಮಾದ ಮೂಲಕ ಇಮ್ರಾನ್ ಹಶ್ಮಿ ಅವರು ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಅಡವಿ ಶೇಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.