ಸ್ಯಾಂಟಿಯಾಗೊ: ಚಿಲಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಕಳೆದ ತಿಂಗಳು 43 ಸಾವಿರ ರೂಪಾಯಿ ಸಂಬಳದ ಬದಲಿಗೆ ಆಕಸ್ಮಿಕವಾಗಿ 286 ಬಾರಿ 1.42 ಕೋಟಿ ರೂ.ಯನ್ನು ಕಂಪನಿ ಪಾವತಿಸಿದೆ. ಇದೇ ಖುಷಿಯಲ್ಲಿ ವ್ಯಕ್ತಿ ಕಂಪನಿಗೆ ರಾಜೀನಾಮೆ ನೀಡಿ ಹಣದ ಜೊತೆಗೆ ಎಸ್ಕೇಪ್ ಆಗಿದ್ದಾನೆ.
Advertisement
ಚಿಲಿಯಲ್ಲಿ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ 45,000 ಸಾವಿರ ರೂಪಾಯಿ (500,000 ಪೆಸೊ) ಸಂಬಳದ ಬದಲಿಗೆ 1.42 ಕೋಟಿ ರೂ. (165,398,851 ಚಿಲಿಯ ಪೆಸೊ)ಯನ್ನು ಕಂಪನಿ ಪಾವತಿಸಿದೆ. ನಂತರ ಕಂಪನಿಯ ಆಡಳಿತವು ಅವರ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ದೋಷ ಕಂಡಿದೆ. ಹೀಗಾಗಿ ಕಂಪನಿಯು ಉದ್ಯೋಗಿಗೆ ಹಣ ಹಿಂದಿರುಗಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ
Advertisement
Advertisement
ಬಳಿಕ ಬ್ಯಾಂಕ್‌ಗೆ ಭೇಟಿ ನೀಡಿ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ ವ್ಯಕ್ತಿ, ಕರೆ ಮಾಡಿದರೆ ನಾನು ನಿದ್ದೆ ಮಾಡುತ್ತಿದ್ದೆ. ಶೀಘ್ರದಲ್ಲಿಯೇ ಬಂದು ಹಣ ಪಾವತಿಸುತ್ತೇನೆ ಎಂದು ಹೇಳಿದ್ದನು. ಆದರೆ ನಂತರ ಕಂಪನಿ ನೀಡಿದ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲದೇ ಜೂನ್ 2ರಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಇದೀಗ ಹಣವನ್ನು ವಸೂಲಿ ಮಾಡಲು ಕಂಪನಿಯು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್ – ಯಾವುದೇ ಫೀಸ್ ಕಟ್ಟುವ ಅಗತ್ಯವಿಲ್ಲ