ಮಿಜೋರಾಂ: ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್ರೆಮ್ಸಿಯಾಮಿ ತನ್ನ ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಹಾಕಿ ಆಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸೋಮವಾರ ಹೀರೋಶಿಮಾದಲ್ಲಿ ನಡೆದ ಎಫ್‍ಐಎಚ್ ಸೀರಿಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹಾಕಿ ಸ್ಟ್ರೈಕರ್ ಆಗಿರುವ ಲಾಲ್ರೆಮ್ಸಿಯಾಮಿ ಪಂದ್ಯ ಗೆದ್ದ ಬಳಿಕ ಮಂಗಳವಾರ ತಮ್ಮ ಊರಿಗೆ ಮರಳಿದ್ದಾರೆ. ಈ ವೇಳೆ ಅಲ್ಲಿನ ಜನರು ಲಾಲ್ರೆಮ್ಸಿಯಾಮಿಗೆ ಸ್ವಾಗತ ಕೋರಿ ಅಭಿನಂದನೆ ತಿಳಿಸಿದರು. ತಂದೆ ನಿಧನದ ಬಳಿಕ ಊರಿಗೆ ಬಂದ ಲಾಲ್ರೆಮ್ಸಿಯಾಮಿರನ್ನು ನೋಡಿ ಮನೆಯವರು ಕಣ್ಣೀರು ಹಾಕಿದ್ದಾರೆ.
Advertisement
Mizoram: Lalremsiami, a member of Indian women's team which won FIH Series Finals hockey tournament in Hiroshima on Sunday, was received at her village in Kolasib dist, y'day. Lalremsiami lost her father to heart attack on Friday but stayed with her team to play finals on Sunday. pic.twitter.com/fTcvyN8ToX
— ANI (@ANI) June 26, 2019
Advertisement
ಸೆಮಿಫೈನಲ್ ಹಿಂದಿನ ದಿನ ಅಂದರೆ ಶುಕ್ರವಾರ ಲಾಲ್ರೆಮ್ಸಿಯಾಮಿ ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆ ಸಾವಿನ ವಿಷಯ ತಿಳಿದ ಲಾಲ್ರೆಮ್ಸಿಯಾಮಿ ಊರಿಗೆ ಮರಳದೇ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ತನ್ನ ತಂದೆಗೆ ಹೆಮ್ಮೆ ತರುತ್ತೇನೆ ಎಂದು ತಂಡದ ಕೋಚ್ ಆದ ಸ್ಜೊರ್ಡ್ ಮಾರಿಜ್ನೆ ಅವರ ಬಳಿ ಹೇಳಿಕೊಂಡಿದ್ದರು.
Advertisement
I received the victorious Indian Women’s Hockey Team who won the #FIHSeriesFinals in Hiroshima. The team is a step closer to reaching #Tokyo2020 Olympics. I congratulated them on their brilliant performance and wished them luck for their future matches. pic.twitter.com/dIOcZRQbur
— Kiren Rijiju (@KirenRijiju) June 25, 2019
Advertisement
ಫೈನಲ್ ನಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ಹೀರೋಶಿಮಾದಿಂದ ದೆಹಲಿಗೆ ತಲುಪಿತು. ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ತಂದೆಯ ನಿಧನದ ನಡುವೆಯೂ ತಂಡಕ್ಕಾಗಿ ಆಡಿದ ಲಾಲ್ರೆಮ್ಸಿಯಾಮಿ ಅವರನ್ನು ಶ್ಲಾಘಿಸಿದರು. ಅಲ್ಲದೆ ಕಿರಣ್ ಅವರು ಭಾರತ ಹಾಕಿ ತಂಡದ ಸದಸ್ಯರನ್ನು ಭೇಟಿಯಾಗಿ ಶುಭಾಶಯ ಕೂಡ ತಿಳಿಸಿದರು.
Here comes the great news! India clinched the Women's FIH Series Finals hockey tournament by beating Japan 3-1 in the finals at Hiroshima????????
What an amazing games displayed by Indian Women team????
CONGRATULATIONS GIRLS! https://t.co/QIBxlGq4H6
— Kiren Rijiju (@KirenRijiju) June 23, 2019
ಕಿರಣ್ ರಿಜಿಜು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ಹಾಕಿ ತಂಡಕ್ಕೆ ಶುಭಾಶಯ ತಿಳಿಸಿದರು. ಹಾಕಿ ತಂಡದ ನಾಯಕಿ ರಾಣಿ ರಾಮ್‍ಪಾಲ್ ಟೂರ್ನ್‍ಮೆಂಟ್‍ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.