ಪ್ಯಾರಿಸ್: ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಸ್ನೇಹಿತ ನರೇಂದ್ರ ಮೋದಿ (Narendra Modi) ನಮ್ಮನ್ನು ಒಟ್ಟಾಗಿ ಸೇರಿಸುತ್ತಾರೆ ಎಂದು ನಂಬುತ್ತೇನೆ ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ತಿಳಿಸಿದರು.
ಭಾರತವು (India) ಜಿ 20 (G-20) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಫ್ರೆಂಚ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ. ಭಾರತವು ಜಿ-20ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಶಾಂತಿ ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ನಿರ್ಮಿಸುವ ಸಲುವಾಗಿ ನನ್ನ ಸ್ನೇಹಿತ ನರೇಂದ್ರ ಮೋದಿ ಅವರು ನಮ್ಮನ್ನು ಒಟ್ಟಿಗೆ ಸೇರಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೇಳಿಕೆಯಿಂದ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ – CT ರವಿ
Advertisement
One Earth.
One Family.
One Future.
India has taken over the presidency of #G20India! I trust my friend @NarendraModi to bring us together in order to build peace and a more sustainable world. pic.twitter.com/MScsCHM7kw
— Emmanuel Macron (@EmmanuelMacron) December 3, 2022
Advertisement
ಇತ್ತೀಚೆಗಷ್ಟೇ ಇಂಡೋನೇಷ್ಯಾದ (Indonesia) ಬಾಲಿಯಲ್ಲಿ (Bali) ನಡೆದ ಜಿ-20 ಶೃಂಗಸಭೆ ಮುಗಿದಿದ್ದು, ಕೊನೆಯ ದಿನದಂದು ಇಂಡೋನೇಷ್ಯಾದಿಂದ ಭಾರತ ಜಿ-20 ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಸ್ವೀಕರಿಸಿತ್ತು. ದೆಹಲಿಯ ಪ್ರಗತಿ ಮೈದಾನದಲ್ಲಿ 2023ರ ಜಿ20 ಶೃಂಗಸಭೆ ಸೆ.9 ಮತ್ತು 10 ರಂದು ನಡೆಯಲಿದೆ. 2008ರಲ್ಲಿ ಜಿ20 ಶೃಂಗಸಭೆ ಆರಂಭಗೊಂಡಿದ್ದು ಮೊದಲ ಬಾರಿಗೆ ಭಾರತಕ್ಕೆ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿದೆ. ಶೃಂಗಸಭೆಯನ್ನು ಆಯೋಜಿಸುವ 18ನೇ ನಗರ ದೆಹಲಿಯಾಗಲಿದೆ. ಮೊದಲ ಮತ್ತು ಮೂರನೇ ಶೃಂಗಸಭೆ ಅಮೆರಿಕದಲ್ಲಿ ನಡೆದಿತ್ತು. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮೀಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ