ನ್ಯೂಯಾರ್ಕ್: ಯಎಸ್ ಓಪನ್ ಅರ್ಹತಾ ಸುತ್ತಿನಲ್ಲಿ ಆಡಲು ನ್ಯೂಯಾರ್ಕ್‍ಗೆ ಆಗಮಿಸಿದ್ದ ಎಮ್ಮಾ ರಾಡುಕಾನು, ತಾನು ಪ್ರಶಸ್ತಿ ಸುತ್ತಿಗೇರುತ್ತೇನೆ ಎಂಬ ವಿಶ್ವಾಸವಿಲ್ಲದೆ ಮೊದಲೇ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಆದರೆ ಟೂರ್ನಿಯುದ್ದಕ್ಕೂ ಅದ್ಭುತ ಸಾಧನೆ ತೋರಿ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗುವ ಮೂಲಕ ರಾಡುಕಾನು ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ.
Advertisement
18ರ ಹರೆಯದ ಎಮ್ಮಾ ರಾಡುಕಾನು ಫೈನಲ್‍ನಲ್ಲಿ ಕೆನಡಾದ 19 ವರ್ಷದ ಲೈಲಾ ಆ್ಯನಿ ಫರ್ನಾಂಡೆಜ್ ವಿರುದ್ಧ 6-4, 6-3 ಸೆಟ್‍ಗಳ ಗೆಲುವಿನೊಂದಿಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬ್ರಿಟನ್‍ನ ಯುವತಾರೆ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು
Advertisement
ಫೈನಲ್‍ನಲ್ಲಿ ಎದುರಾಳಿಯಾಗಿ ಆಡಿದ ಈ ಇಬ್ಬರು ಆಟಗಾರ್ತಿಯರು ಕೂಡ 3 ವರ್ಷಗಳ ಹಿಂದೆ ವಿಂಬಲ್ಡನ್ ಕಿರಿಯರ ನಡುವಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇದೀಗ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ಎದುರಾಳಿಯಾಗಿ ಆಡಿ ಎಮ್ಮಾ ರಾಡುಕಾನು, ಲೈಲಾ ಆ್ಯನಿ ಫರ್ನಾಂಡೆಜ್ ವಿರುದ್ಧ ಗೆದ್ದು ಬೀಗಿದ್ದಾರೆ. ರೋಚಕವಾಗಿ ಸಾಗಿದ ಫೈನಲ್ ಪಂದ್ಯಾಟ 1 ಗಂಟೆ 51 ನಿಮಿಷಗಳ ಕಾಲ ನಡೆಯಿತು. ಇಬ್ಬರು ಆಟಗಾರ್ತಿಯರು ಕೂಡ ಜಿದ್ದಾಜಿದ್ದಿಯಲ್ಲಿ ಕಾದಾಡಿ ಪ್ರೇಕ್ಷಕರನ್ನು ರಂಜಿಸಿದರು.
Advertisement
Advertisement
ದಾಖಲೆಗಳ ಒಡತಿ ರಾಡುಕಾನು
ರಾಡುಕಾನು ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನೊಂದಿಗೆ ಹಲವು ದಾಖಲೆಗಳ ಒಡತಿಯಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ ಆಡಿ ಗೆದ್ದು, ಪ್ರಶಸ್ತಿ ಸುತ್ತಿಗೇರಿ ವಿಜಯಿಯಾದ ಮೊದಲ ಆಟಗಾರ್ತಿ ಎಂಬ ನೂತನ ದಾಖಲೆ ಬರೆದರು. ಈ ಮೊದಲು 150ನೇ ರ್ಯಾಕಿಂಗ್ ಹೊಂದಿದ್ದ ರಾಡುಕಾನು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬಳಿಕ ವಿಶ್ವ ರ‍್ಯಾಕಿಂಗ್ ನಲ್ಲಿ 23ನೇ ಸ್ಥಾನಕ್ಕೇರಿದ್ದು, 1977ರಲ್ಲಿ ವರ್ಜೀನಿಯಾ ವೇಡ್ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬ್ರಿಟನ್‍ನ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ತಂದೆ-ತಾಯಿಯನ್ನ ವಿಮಾನದಲ್ಲಿ ಕರೆದೊಯ್ದ ಚಿನ್ನದ ಹುಡುಗ
Everyone has their fairy tale ending ????@EmmaRaducanu | #USOpen pic.twitter.com/2ttCchmixi
— US Open Tennis (@usopen) September 11, 2021
2004ರ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಅತೀ ಕಿರಿಯ ಆಟಗಾರ್ತಿಯಾಗಿದ್ದು, 2004ರಲ್ಲಿ ರಷ್ಯಾದ ಮರಿಯಾ ಶರಪೋವಾ 17ನೇ ವಯಸ್ಸಿನಲ್ಲಿ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ದಾಖಲೆ ನಿರ್ಮಿಸಿದ್ದರು. ರಾಡುಕಾನು ಅರ್ಹತಾ ಸುತ್ತಿನಿಂದ ಹಿಡಿದು ಪ್ರಶಸ್ತಿ ಸುತ್ತಿನ ವರೆಗೂ ತಮ್ಮ ಅಜೇಯ ಓಟವನ್ನು ಮುಂದುವರಿಸಿ ಒಂದು ಸೆಟ್‍ಗಳನ್ನು ಸೋಲದೇ 10 ಪಂದ್ಯಗಳನ್ನು ಗೆದ್ದು 18.38 ಕೋಟಿ ರೂ. ಬಹುಮಾನದ ಒಡತಿಯಾದರು.