ಕೊಲಂಬೊ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಹಾಗೂ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಎಮರ್ಜಿಂಗ್ ಏಷ್ಯಾಕಪ್-2023 ಟೂರ್ನಿ ಗೆಲ್ಲುವ ಅವಕಾಶವನ್ನ ಭಾರತ ಎ ತಂಡ ಕೈಚೆಲ್ಲಿದೆ.
ಕೊಲಂಬೊದಲ್ಲಿ ನಡೆದ ಅಂಡರ್ 23 ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಲಾಗದೇ ಹೀನಾಯ ಸೋಲನುಭವಿಸಿದೆ. ಭಾರತ ಎ ತಂಡ 224 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಳ್ಳುವ ಮೂಲಕ ಪಾಕಿಸ್ತಾನದ ವಿರುದ್ಧ 128 ರನ್‌ಗಳ ಹೀನಾಯ ಸೋಲನುಭವಿಸಿದೆ. ಇದನ್ನೂ ಓದಿ: Korea Open 2023: ಕೊರಿಯಾ ಓಪನ್ಸ್ ಗೆದ್ದ ಭಾರತದ ಸಾತ್ವಿಕ್-ಚಿರಾಗ್ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್
Advertisement
Advertisement
ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಎ ತಂಡ ಮೊದಲ ವಿಕೆಟ್ ಪತನಕ್ಕೆ 8.3 ಓವರ್‌ಗಳಲ್ಲಿ 64 ರನ್‌ಗಳಿಸುವ ಮೂಲಕ ಉತ್ತಮ ಆರಂಭವನ್ನೇ ನೀಡಿತ್ತು. ಆನಂತರದಲ್ಲಿ ಒಂದೊಂದೇ ವಿಕೆಟ್ ಪತನಗೊಂಡಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪೈಕಿ ಅಭಿಷೇಕ್ ಶರ್ಮಾ 61 ರನ್ (51 ಎಸೆತ, 5 ಬೌಂಡರಿ, 1 ಸಿಕ್ಸರ್), ಯಶ್ ಧುಲ್ 39 ರನ್ (41 ಎಸೆತ, 4 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಸ್ಥಿರವಾಗಿ ನಿಲ್ಲದ ಕಾರಣ ಪಾಕಿಸ್ತಾನಕ್ಕೆ ಸುಲಭ ತುತ್ತಾದರು.
Advertisement
ಕಳೆದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಮೆರೆದಾಡಿದ್ದ ಸಾಯಿ ಸುದರ್ಶನ್ ಕೇವಲ 29 ರನ್‌ಗಳಿಗೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ನಂತರದಲ್ಲಿ ನಿಶಾಂತ್ ಸಿಂಧು 10, ಧ್ರುವ್ ಜುರೆಲ್ 9, ರಿಯಾನ್ ಪರಾಗ್ 14, ಹರ್ಶಿತ್ ರಾಣಾ 13, ಮುನಾವ್ ಸುತಾರ್ 7, ಆರ್‌ಎಸ್ ಹಂಗಾರ್ಕರ್ 11 ಹಾಗೂ ಯುವರಾಜ್‌ಸಿನ್ಹ ದೋದಿಯಾ 5 ರನ್ ಗಳಿಸಿ ಔಟಾದರು. ಒಟ್ಟಾರೆ ಭಾರತ ಎ ತಂಡ 40 ಓವರ್‌ಗಳಲ್ಲಿ 224 ರನ್‌ಗಳಿಗೆ ಸರ್ವಪತನ ಕಂಡಿತು. 128 ರನ್‌ಗಳ ಜಯ ಸಾಧಿಸಿದ ಪಾಕಿಸ್ತಾನ ಟ್ರೋಫಿ ಗೆದ್ದು ಬೀಗಿತು.
Advertisement
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 8 ವಿಕೆಟ್ ನಷ್ಟಕ್ಕೆ 50 ಓವರ್‌ಗಳಲ್ಲಿ 352 ರನ್ ಕಲೆಹಾಕಿತ್ತು. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!
2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಭಾರತ ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿ ಭಾರತ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಾಕ್ 2019ರಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೆ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Web Stories