– ಇಂದಿರಾ ಗಾಂಧಿಗೆ ‘ಕೈ’ ಕೊಟ್ಟ ಜನ
– ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಯಾರು?
ಪಬ್ಲಿಕ್ ಟಿವಿ ವಿಶೇಷ
ಭಾರತೀಯ ರಾಜಕಾರಣದಲ್ಲಿ ಏಕಚಕ್ರಾಧಿಪತಿಯಂತೆ ಮೆರೆಯುತ್ತಿದ್ದ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದ ಚುನಾವಣೆ ಇದು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷಗಳೆಲ್ಲ ಒಂದಾಗಿ ಕಾಂಗ್ರೆಸ್ (Congress) ಪಕ್ಷವನ್ನು ಹೀನಾಯಕವಾಗಿ ಸೋಲಿಸಿದವು. ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಪರಿಸ್ಥಿತಿಯನ್ನು ಅನುಭವಿಸಿದ್ದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದರು.
Advertisement
ಸ್ವತಂತ್ರ ಭಾರತದ 6ನೇ ಸಾರ್ವತ್ರಿಕ ಚುನಾವಣೆ 1975 ರಲ್ಲಿ ನಡೆಯಬೇಕಿತ್ತು. ಆದರೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿ ಚುನಾವಣೆಯನ್ನು ಎರಡು ವರ್ಷಗಳ ವರೆಗೆ ಮುಂದೂಡಿದರು. ತುರ್ತು ಪರಿಸ್ಥಿತಿಯು ಕಾಂಗ್ರೆಸ್‌ನ ಮೊದಲ ಪತನಕ್ಕೆ ಕಾರಣವಾಯಿತು. ಜನತಾ ಪಕ್ಷ ನೇತೃತ್ವದಲ್ಲಿ ಸಿಪಿಎಂ, ಎಸ್‌ಎಡಿ, ಪಿಡಬ್ಲ್ಯೂಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಪಿಐ, ಡಿಎಂಕೆ ಕೂಟ ರಚಿಸಿಕೊಂಡು ಚುನಾವಣೆ ಎದುರಿಸಿ ಗೆದ್ದವು. ಇತ್ತ ಕಾಂಗ್ರೆಸ್ ನೇತೃತ್ವದ ಎಐಎಡಿಎಂಕೆ, ಸಿಇಐ, ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್ ಕೂಟ ಸೋತು ನೆಲಕಚ್ಚಿದವು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?
Advertisement
Advertisement
5 ದಿನ ಚುನಾವಣೆ
1977 ರ ಮಾರ್ಚ್ 16 ರಿಂದ 20 ರ ವರೆಗೆ ಚುನಾವಣೆ (1977 Lok Sabha Elections) ನಡೆಯಿತು. ಒಟ್ಟು ಐದು ದಿನ ಮತದಾನ ನಡೆಯಿತು.
Advertisement
ಮತದಾರರು
32,11,74,327 ಒಟ್ಟು ಮತದಾರರಿದ್ದರು. ಅವರ ಪೈಕಿ 19,42,63,915 ಮತದಾರರು ವೋಟು ಚಲಾಯಿಸಿದರು. 60.5% ರಷ್ಟು ಮತ ಚಲಾವಣೆಯಾಗಿತ್ತು.
542 ಸೀಟ್
27 ರಾಜ್ಯಗಳ ಒಟ್ಟು 542 ಸ್ಥಾನಗಳಿಗೆ ಮತದಾನ ನಡೆದಿತ್ತು. ಐದು ರಾಷ್ಟ್ರೀಯ ಹಾಗೂ 15 ಪ್ರಾದೇಶಿಕ ಪಕ್ಷಗಳು ಚುನಾವಣೆ ಎದುರಿಸಿದ್ದವು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್ ಕುಸಿದರೂ ಗೆದ್ದ ಇಂದಿರಾ
ಯಾವ ಪಕ್ಷಕ್ಕೆ ಎಷ್ಟು ಸೀಟ್?
ಜನತಾ ಪಕ್ಷ 295, ಕಾಂಗ್ರೆಸ್ 154, ಸಿಪಿಎಂ 22, ಎಡಿಕೆ 18, ಎಸ್‌ಎಡಿ 9, ಐಎನ್‌ಡಿ 9, ಇತರೆ 35 ಸ್ಥಾನಗಳನ್ನು ಗೆದ್ದವು.
ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಆಡಳಿತ
ಸ್ವಾತಂತ್ರ‍್ಯಾ ನಂತರ ಮೊದಲ ಬಾರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿತು. 41.32% ರಷ್ಟು ಮತಗಳ ಹಂಚಿಕೆಯೊAದಿಗೆ, ಜನತಾ ಪಕ್ಷವು 405 ಸ್ಥಾನಗಳಲ್ಲಿ 295 ಸ್ಥಾನಗಳನ್ನು ಪಡೆದುಕೊಂಡು ಭರ್ಜರಿ ಜಯಗಳಿಸಿತು. ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಒಟ್ಟು 330 ಸ್ಥಾನಗಳನ್ನು ಗೆದ್ದು ಬೀಗಿದವು.
ಕಾಂಗ್ರೆಸ್ ಪಕ್ಷ 492 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ 34.52% ಮತ ಹಂಚಿಕೆಯೊಂದಿಗೆ 154 ಸ್ಥಾನಗಳನ್ನು ಮಾತ್ರ ಗೆದ್ದಿತು. ಜನತಾ ಪಕ್ಷವು ಭಾರತದ ದಕ್ಷಿಣದಲ್ಲಿ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಗಳಿಸಿತು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!
ಉತ್ತರದಲ್ಲಿ ನೆಲಕಚ್ಚಿದ ಕಾಂಗ್ರೆಸ್
ಕಾಂಗ್ರೆಸ್‌ನಲ್ಲಿರುವ 154 ಸದಸ್ಯರಲ್ಲಿ ಇಬ್ಬರು ಮಾತ್ರ ಉತ್ತರದಿಂದ ಗೆದ್ದು ಬಂದರು. 92 ಮಂದಿ ದಕ್ಷಿಣದ ನಾಲ್ಕು ರಾಜ್ಯಗಳಿಂದ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದರು.
ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.
ಭಾರತೀಯ ಲೋಕದಳದ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದ ವಿರೋಧ ಪಕ್ಷಗಳ ಮೈತ್ರಿಕೂಟದ ಜನತಾ ಪಕ್ಷವು ಕಾಂಗ್ರೆಸ್ ಅನ್ನು ಸೋಲಿಸಿ ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಸ್ಥಾಪಿಸಿತು.
ಮೊದಲ ಕಾಂಗ್ರೆಸ್ಸೇತರ ಪ್ರಧಾನಿ
ಮೊರಾರ್ಜಿ ದೇಸಾಯಿ ಅವರು 1977 ರ ಮಾರ್ಚ್ 24 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?
ತುರ್ತು ಪರಿಸ್ಥಿತಿ ಕಾಂಗ್ರೆಸ್‌ಗೆ ಮುಳುವಾಯಿತೇ?
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಅವರ ಈ ನಡೆ ಸರ್ವಾಧಿಕಾರಿ ಅಧಿಕಾರವನ್ನು ಪ್ರಚೋದಿಸಿತು. ಇದು ಮೊರಾರ್ಜಿ ದೇಸಾಯಿ ಮತ್ತು ಜಯಪ್ರಕಾಶ ನಾರಾಯಣ್ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಜೈಲು ಕಂಬಿ ಹಿಂದೆ ತಳ್ಳಿತು. 1975 ಮತ್ತು 1977 ರ ನಡುವೆ ಅನೇಕ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು.
ತುರ್ತು ಪರಿಸ್ಥಿತಿಯು ಪತ್ರಿಕಾ ಸ್ವಾತಂತ್ರ‍್ಯ ಮತ್ತು ನಾಗರಿಕ ಸ್ವಾತಂತ್ರ‍್ಯಗಳ ಮೇಲೆ ಮಿತಿಗಳನ್ನು ಹೇರಿತು. ಕಾಂಗ್ರೆಸ್ಸೇತರ ನಾಯಕರ ಮೇಲೆ ದಬ್ಬಾಳಿಕೆ ಹೆಚ್ಚಿಸಿತು. ಕೊನೆಗೆ ಇಂದಿರಾ ಗಾಂಧಿಯವರು ಹೊಸ ಚುನಾವಣೆಗೆ ಕರೆ ನೀಡುವುದರೊಂದಿಗೆ 1977 ರ ಮಾರ್ಚ್ ತಿಂಗಳಿಗೆ ತುರ್ತು ಪರಿಸ್ಥಿತಿಯ ಅಗ್ನಿಪರೀಕ್ಷೆ ಕೊನೆಗೊಂಡಿತು. ಇತರ ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡುವಂತೆಯೂ ಅವರು ಆದೇಶಿಸಿದ್ದರು.
ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ, ಮೊರಾರ್ಜಿ ದೇಸಾಯಿ ಅಧ್ಯಕ್ಷರಾಗಿ ಮತ್ತು ಚರಣ್ ಸಿಂಗ್ ಉಪನಾಯಕರಾಗಿ ಜನತಾ ಪಕ್ಷವನ್ನು ಸ್ಥಾಪಿಸಿದರು. ಭಾರತೀಯ ಜನಸಂಘ, ಭಾರತೀಯ ಲೋಕದಳ, ಕಾಂಗ್ರೆಸ್ (ಒ) ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು.