ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯ ರಾಜಕೀಯ (Politics) ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ಪಾಲಿಟಿಕ್ಸ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕಂಗನಾ, 40 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ತಮಿಳು ನಟ ಕಾರ್ತಿಗೆ ಆಶಿಕಾ ರಂಗನಾಥ್ ಜೋಡಿ
Advertisement
ನಟಿ ಬಂಗಲೆಯನ್ನು ಮಾರಾಟಕ್ಕೆ ಮುಂದಾಗಿರುವ ವಿಷಯವನ್ನು ಯೂಟ್ಯೂಬ್ ಚಾನೆಲ್ವೊಂದು ವರದಿ ಮಾಡಿದೆ. ಮುಂಬೈನಲ್ಲಿರುವ ಕೋಟ್ಯಾಂತರ ಮೌಲ್ಯದ ಆ ಕಟ್ಟಡದಲ್ಲಿಯೇ ಮಣಿಕರ್ಣಿಕಾ ಸಿನಿಮಾ ಆಫೀಸ್ ಕೂಡ ಇದೆ. ಈ ಕಟ್ಟಡವು ಮುಂಬೈನ ಬಾಂದ್ರಾದಲ್ಲಿ ಎರಡು ಮಹಡಿಗಳಲ್ಲಿ 3,042 ಚದರ ಅಡಿಗಳಲ್ಲಿ ಹರಡಿದೆ. ಇದೀಗ 40 ಕೋಟಿ ರೂ. ಮಾರಲು ನಿಗದಿಯಾಗಿದೆ ಎನ್ನಲಾಗಿದೆ.
Advertisement
Advertisement
ಕಂಗನಾ ಅವರ ಇದೇ ಕಟ್ಟಡ ಈ ಮೊದಲು ಕೂಡ ಸುದ್ದಿ ಆಗಿತ್ತು. ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಕಟ್ಟಡವನ್ನು ವಿಸ್ತರಿಸಲಾಗಿತ್ತು ಎಂಬ ಕಾರಣಕ್ಕೆ ಮುಂಬೈ ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು. ಅದರ ವಿರುದ್ಧ ನಟಿ ಗರಂ ಆಗಿದ್ದರು.
Advertisement
ಅಂದಹಾಗೆ, ಕಂಗನಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ (Emergency Film) ಸಿನಿಮಾ ರಿಲೀಸ್ ಸಿದ್ಧವಾಗಿದೆ. ಸೆ.6ರಂದು ರಿಲೀಸ್ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ.