ಮುಂಬೈ: ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆಯಲ್ಲಿ ಇಂದು ಬೆಳಗ್ಗೆ ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ 22 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಾಲ್ತುಳಿತ ದೃಶ್ಯವನ್ನು ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೆರೆಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.
ಇಂದು ಬೆಳಗ್ಗೆ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ಜನರು ಕ್ಕಿಕ್ಕಿರಿದು ನಿಂತಿದ್ದರು. ಮಳೆ ಜೋರಾದ ಹಿನ್ನೆಲೆಯಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಸೇತುವೆಯತ್ತ ಧಾವಿಸಿದ್ದರಿಂದ ಈ ದುರಂತವಾಗಿದೆ. ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು. ಅಲ್ಲದೇ ಕಾಲ್ತುಳಿತದ ದೃಶ್ಯಗಳು ಅಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು ಕಾಲ್ತುಳಿತದ ವಿಡಿಯೋದಲ್ಲಿ ಸೇತುವೆಯಲ್ಲಿದ್ದ ಜನರು ಕಾಲು ಕೆಳಗೆ ಸಿಕ್ಕಿ ಒದ್ದಾಡಿ ತಮ್ಮ ಪ್ರಾಣ ಉಳಿಸುವಂತೆ ಕೂಗುತ್ತಿರುವುದು ಮೊಬೈಲ್‍ನಲ್ಲಿ ಸೆರೆಯಾಗಿವೆ.
Advertisement
ನೂಕು ನುಗ್ಗಲು ಆದ ಪರಿಣಾಮವಾಗಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಬಿದ್ದವರ ಮೇಲೆ ಓಡಾಡಿದ್ದಾರೆ. ಅಲ್ಲದೇ ಸೇತುವೆ ಕಂಬಿ ಹಿಡಿದು ನೇತಾಡಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ಸದ್ಯ ಕಾಲ್ತುಳಿತಕ್ಕೆ ಒಳಗಾಗಿದ್ದವರ ಪೈಕಿ 22 ಜನ ಮೃತಪಟ್ಟಿದ್ದು ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಎರಡು ಫ್ಲಾಟ್ ಫಾರಂ ಹೊಂದಿಕೊಂಡಿರುವ ಸೇತುವೆಗೆ ಜನ ನುಗ್ಗಿದ್ದಾರೆ. ತೀವ್ರ ನೂಕು ನುಗ್ಗಲು ಆದ ಕಾರಣ ಒಬ್ಬರ ಮೇಲೆ ಒಬ್ಬರು ಬಿದ್ದರು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಭಾರೀ ಸಂಖ್ಯೆಯಲ್ಲಿ ಜನ ಸೇತುವೆ ಮೇಲೆ ಇದ್ದ ಕಾರಣ ಈ ದುರಂತ ಸಂಭವಿಸಿದೆ.
Advertisement
₹5 lakh announced for the next of the kins of deceased and all the medical expenses of the injured will be borne by GoM.#Elphinstone
— Devendra Fadnavis (@Dev_Fadnavis) September 29, 2017
Bohot hi dukhad haadsa hai, high level inquiry ka order de diya hai: Piyush Goyal,Railway Minister #MumbaiStampede pic.twitter.com/1FCeLgVVCF
— ANI (@ANI) September 29, 2017
₹5 lakh announced for the next of the kins of deceased and all the medical expenses of the injured will be borne by GoM.#Elphinstone
— Devendra Fadnavis (@Dev_Fadnavis) September 29, 2017