ಮುಂಬೈ: ಯುಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಎಲೋನ್ ಮಸ್ಕ್ (Elon Musk) ನಡುವಿನ ಭೇಟಿಯ ಒಂದು ತಿಂಗಳ ನಂತರ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟೆಸ್ಲಾ ಕಂಪನಿ ತನ್ನ ಶಾಖೆಯನ್ನ ತೆರೆಯಲು ಜಾಗ ಪಡೆದುಕೊಂಡಿದೆ.
ಟೆಸ್ಲಾ ಇಂಡಿಯಾ ಮೋಟಾರ್ (Tesla India Motors) ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ (Energy Private Limited) ಪುಣೆಯ ವಿಮಾನ ನಗರದಲ್ಲಿರುವ ಪಂಚಶೀಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಕಚೇರಿಗೆ ತೆರೆಯಲು ಸ್ಥಳವನ್ನ ಗುತ್ತಿಗೆ ಪಡೆದುಕೊಂಡಿದೆ.
Advertisement
Advertisement
ಇದು ಭಾರತದ ಮಾರುಕಟ್ಟೆಗೆ ಟೆಸ್ಲಾ (Tesla) ಎಲೆಕ್ಟ್ರಿಕ್ ವಾಹನ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಾಗಿದೆ. ಈ ಹಿಂದೆ ಟೆಸ್ಲಾದ ಹಿರಿಯ ಅಧಿಕಾರಿಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಲು ಇನ್ವೆಸ್ಟ್ ಇಂಡಿಯಾದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದರು. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!
Advertisement
ಮಾಹಿತಿಗಳ ಪ್ರಕಾರ, ಟೆಸ್ಲಾದ ಭಾರತೀಯ ಅಂಗಸಂಸ್ಥೆಯು ಪಂಚಶೀಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,580 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಟೇಬಲ್‌ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಒಪ್ಪಂದದ ಪ್ರಕಾರ 34.95 ಲಕ್ಷ ಭದ್ರತಾ ಠೇವಣಿಯೊಂದಿಗೆ ಮಾಸಿಕ 11.65 ಲಕ್ಷ ರೂ.ಗಳನ್ನು ಟೆಸ್ಲಾ ಸಂಸ್ಥೆ ಪಾವತಿಸಲಿದೆ. ಇದನ್ನೂ ಓದಿ: ದೈತ್ಯ ಟ್ವಿಟ್ಟರ್, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್ ಪ್ಲ್ಯಾನ್!
Advertisement
ಇದೇ 2023ರ ಅಕ್ಟೋಬರ್ 1 ರಿಂದ ಕಚೇರಿ ಸ್ಥಳದ ಬಾಡಿಗೆ ಪ್ರಾರಂಭವಾಗುತ್ತದೆ. ಈ ಲೀಸ್ ಒಪ್ಪಂದ 36 ತಿಂಗಳ ಲಾಕ್ ಇನ್ ಅವಧಿ ಹೊಂದಿದ್ದು, ಪ್ರತಿ ವರ್ಷ 5% ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತಿಗೆ ಎರಡು ಕಂಪನಿಗಳು ಒಳಪಟ್ಟಿವೆ.
Web Stories