InternationalLatestLeading NewsMain Post

ಮಾಜಿ ಗೆಳತಿಯ ಜೊತೆ ಮಸ್ಕ್ ಫೋಟೋ – ಭಾರೀ ಮೊತ್ತಕ್ಕೆ ಸೇಲ್

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವಿಟ್ಟರ್ (Twitter) ಖರೀದಿ ವಿಚಾರವಾಗಿ ಸುದ್ದಿಯಲ್ಲಿದ್ದ ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ (Elon Musk) ಈಗ ಮತ್ತೊಂದು ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ.

ಹೌದು, ಎಲಾನ್ ಮಸ್ಕ್ ಅವರ ಕಾಲೇಜು ಫೋಟೋಗಳನ್ನು ಇತ್ತೀಚೆಗೆ ಹರಾಜು ಮಾಡಲಾಯಿತು. ಮಸ್ಕ್ (Elon Musk Girl Friend) ತನ್ನ ಮಾಜಿ ಗೆಳತಿ ಜೆನಿಫರ್ ಗ್ವಿನ್ನೆ ಅವರೊಂದಿಗೆ ಇರುವ ಫೋಟೋಗಳು ಬರೋಬ್ಬರಿ 1.3 ಕೋಟಿ (1,65,000 ಯುಎಸ್ ಡಾಲರ್) ಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಇದನ್ನೂ ಓದಿ: ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

ಆರ್‌.ಆರ್‌ ಹರಾಜು (RR Auction) ಸಂಸ್ಥೆ ಈ ಫೋಟೋಗಳನ್ನು ಹಂಚಿಕೊಂಡಿದೆ. ಮಸ್ಕ್ ಮತ್ತು ಗ್ವಿನ್ನೆ 1994 ಮತ್ತು 1995 ರ ನಡುವೆ ಇಬ್ಬರೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ತೆಗೆಸಿರುವ ಘೋಟೋ ಇದು ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.

ಒಟ್ಟು 18 ಕ್ಯಾಂಡಿಡ್ ಫೋಟೋಗಳು ಹರಾಜಿನಲ್ಲಿದ್ದವು. ಪ್ರತಿಯೊಂದನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

ಇತ್ತೀಚೆಗೆ 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ)ಗೆ ಎಲಾನ್ ಮಸ್ಕ್ ಅವರು ಟ್ವಿಟ್ಟಿರ್ ಕಂಪನಿಯ ಪೂರ್ತಿ ಷೇರು ಖರೀದಿಗೆ ಮುಂದಾಗಿದ್ದರು. ಆದರೆ ಟ್ವಿಟ್ಟರ್‌ನಲ್ಲಿರುವ ನಕಲಿ ಖಾತೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

Live Tv

Leave a Reply

Your email address will not be published.

Back to top button