ವಾಷಿಂಗ್ಟನ್: ಕಳೆದ ವಾರ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಾಗಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಇದೀಗ ಟ್ವಿಟ್ಟರ್ ಸಿಇಒ ತಮ್ಮ ಮಾತನ್ನು ಬದಲಿಸಿದ್ದಾರೆ.
ಪರಾಗ್ ಅಗರ್ವಾಲ್ ಟೆಸ್ಲಾ ಮುಖ್ಯಸ್ಥ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಾಗಲು ಬಯಸುವುದಿಲ್ಲ. ಆದರೆ ಕಂಪನಿಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಎಲೋನ್ ಟ್ವಿಟ್ಟರ್ ಮಂಡಳಿಯನ್ನು ಸೇರದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಾನು ಎಲೋನ್ ಅವರೊಂದಿಗೆ ಅನೇಕ ಚರ್ಚೆಗಳನ್ನು ನಡೆಸಿದ್ದೇನೆ ಹಾಗೂ ಕಂಪನಿಗೆ ಮುಂದೆ ಆಗಬಹುದಾದ ಅಪಾಯಗಳನ್ನು ಸರಿಪಡಿಸಲು ಮುಂದಾಗಿದ್ದೇನೆ. ಮಂಡಳಿಯ ಎಲ್ಲಾ ಷೇರುದಾರರಂತೆಯೇ ಎಲೋನ್ ಕೂಡಾ ಸದಸ್ಯರಾಗಿಯೇ ಇರುವುದು ಉತ್ತಮ ಮಾರ್ಗವಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್
Advertisement
Elon has decided not to join our board. I sent a brief note to the company, sharing with you all here. pic.twitter.com/lfrXACavvk
— Parag Agrawal (@paraga) April 11, 2022
Advertisement
ಮಸ್ಕ್ ಆಡಳಿತ ಮಂಡಳಿಗೆ ಸೇರುವುದಿಲ್ಲ ಎಂದಿದ್ದಾರೆ. ಅವರ ನಿರ್ಧಾರ ಅತ್ಯುತ್ತಮವಾದುದು. ಷೇರುದಾರರು ನಮ್ಮ ಮಂಡಳಿಯಲ್ಲಿ ಇದ್ದರೂ, ಇಲ್ಲದಿದ್ದರೂ ಕೆಲಸಗಳು ಮೌಲ್ಯಯುತವಾಗಿಯೇ ನಡೆಯುತ್ತದೆ. ಎಲೋನ್ ಕಂಪನಿಯ ಅತೀ ದೊಡ್ಡ ಷೇರುದಾರರಾಗಿದ್ದಾರೆ. ಆದರೂ ಅವರ ಸಲಹೆಗಳಿಗೆ ನಮ್ಮ ಮಂಡಳಿ ಯಾವಾಗಲೂ ಮುಕ್ತವಾಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್
ಕಳೆದವಾರ ಮಸ್ಕ್ ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಖರೀದಿಸಿ ಕಂಪನಿಯ ಅತಿ ದೊಡ್ಡ ಷೇರುದಾರರೆನಿಸಿಕೊಂಡರು. ವಿಶ್ವದ ಶ್ರೀಮಂತ ಷೇರುದಾರನಾಗುತ್ತಿದ್ದಂತೆ ಅಪ್ಲಿಕೇಶನ್‌ನಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಯಿತು. ಅದರಲ್ಲಿ ಮುಖ್ಯವಾಗಿ ಬಹು ನಿರೀಕ್ಷಿತ ಎಡಿಟ್ ಬಟನ್ ಇದ್ದು, ಇದು ಶೀಘ್ರವೇ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ಈ ಫೀಚರ್ ಅನ್ನು ಟ್ವಿಟ್ಟರ್ ಬ್ಲೂನಲ್ಲಿ ಪರೀಕ್ಷಿಸಲಾಗುತ್ತಿದೆ.