– ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಅಧ್ಯಯನಗಳಿಗೆ ಬೀಳುತ್ತಾ ಬ್ರೇಕ್?
ವಾಷಿಂಗ್ಟನ್: ನಿರೀಕ್ಷೆಯಂತೆ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಅವರಿಗೆ ಟ್ರಂಪ್ ಸರ್ಕಾರದಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರೊಂದಿಗೆ ಎಲೋನ್ ಮಸ್ಕ್ ಅವರು ಸರ್ಕಾರಿ ದಕ್ಷತೆಯ ಇಲಾಖೆಯನ್ನು (Department of Government Efficiency) ಮುನ್ನಡೆಸಲಿದ್ದಾರೆ.
ಇಬ್ಬರೂ ಸರ್ಕಾರಕ್ಕೆ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇವರಿಬ್ಬರಿಂದ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಯಾಗಲಿದೆ ಎಂದು ಟ್ರಂಪ್ (Donald Trump) ಹೇಳಿದ್ದಾರೆ.
Advertisement
Department of Government Efficiency ಇಲಾಖೆಯನ್ನು ಸಂಕ್ಷಿಪ್ತವಾಗಿ DOGE ಎಂದು ಕರೆಯಲಾಗುತ್ತಿದೆ. ಈ ಇಲಾಖೆ ರಚನೆಯಾಗುವ ಮೊದಲೇ ಅಮೆಕದಲ್ಲಿ DOGE ಫೇಮಸ್ ಆಗಿತ್ತು. ಇದು ಕ್ರಿಪ್ಟೋ ಕರೆನ್ಸಿಯಾಗಿದ್ದು ಹಲವು ಬಾರಿ ಮಸ್ಕ್ ಅವರು Dogecoin ಬಗ್ಗೆ ಪ್ರಚಾರ ಮಾಡಿದ್ದರು.
Advertisement
Advertisement
ಏನಿದು ಸರ್ಕಾರಿ ದಕ್ಷತೆಯ ಇಲಾಖೆ?
ಟ್ರಂಪ್ ಸರ್ಕಾರ ಹೊಸ ಇಲಾಖೆ ಇದಾಗಿದ್ದು ಮಸ್ಕ್ ಅವರು ಚುನಾವಣೆಯ ಸಮಯದಲ್ಲಿ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಇಲಾಖೆ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ತಕ್ಷಣವೇ ಸ್ಪಷ್ಟವಾಗಿಲ್ಲ.ಆದರೂ ಟ್ರಂಪ್ ಪ್ರಕಾರ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯುವುದು, ಹೆಚ್ಚುವರಿ ನಿಯಮ ಮತ್ತು ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲಿದೆ. ಇದರ ಜೊತೆ ಫೆಡರಲ್ ಏಜೆನ್ಸಿಗಳನ್ನು ಪುನರ್‌ರಚಿಸಲಿದೆ.
Advertisement
ಮುಖ್ಯವಾಗಿ ಈ ಇಲಾಖೆ ಅಮೆರಿಕ ಸರ್ಕಾರ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಧ್ಯಯನಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್ ಭವಿಷ್ಯ
— Elon Musk (@elonmusk) November 13, 2024
ಈ ಇಲಾಖೆ ಸರ್ಕಾರಿ ಹಣವನ್ನು ದುರುಪಯೋಗ ಮಾಡುವವರಿಗೆ ಶಾಕ್ ನೀಡಲಿದೆ. ಯಾವುದಾದರೂ ಮುಖ್ಯವಾಗಿರುವುದನ್ನು ತೆಗೆಯುತ್ತಿದ್ದೇವೆ ಎಂದು ನೀವು ಭಾವಿಸಿದರೆ ನಮಗೆ ತಿಳಿಸಿ ಎಂದು ಮಸ್ಕ್ ಅಮೆರಿಕ ಜನರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರ ಹೇಗೆ ಪ್ರಯೋಜನಕ್ಕೆ ಬಾರದ ವಿಷಯಗಳಿಗೆ ಕೋಟ್ಯಂತರ ಡಾಲರ್ ಹಣವನ್ನು ಖರ್ಚು ಮಾಡುತ್ತದೆ ಎನ್ನುವುದಕ್ಕೆ ಮಸ್ಕ್ ಎಕ್ಸ್ ಬಳಕೆದಾರರೊಬ್ಬರ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿ ತಿಳಿಸಿದ್ದಾರೆ.
— Elon Musk (@elonmusk) November 13, 2024
ಪೋಸ್ಟ್‌ನಲ್ಲಿ ಏನಿದೆ?
ಅಮೆರಿಕ ತೆರಿಗೆಯ ಅಸಂಬದ್ಧ ಕಸ ಇಲ್ಲಿದೆ. ಆಡುಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡಲು 1.5 ಮಿಲಿಯನ್ ಡಾಲರ್, ಖಾಲಿ ಕಟ್ಟಡ ನಿರ್ವಹಣೆಗೆ 1.7 ಬಿಲಿಯನ್ ಡಾಲರ್, ಧೂಮಪಾನವನ್ನು ನಿಲ್ಲಿಸಲು ಪರ್ಯಾಯ ಸಂಗೀತದ ದೃಶ್ಯವನ್ನು ಪ್ರಚಾರ ಮಾಡುವ ಅಭಿಯಾನಕ್ಕೆ 5 ಮಿಲಿಯನ್ ಡಾಲರ್, ಕೃಷಿ ಇಲಾಖೆಯಲ್ಲಿ ಒಬ್ಬ ಪೂರ್ಣ-ಸಮಯದ ಉದ್ಯೋಗಿಯ ನೇಮಕಕ್ಕೆ 2 ಮಿಲಿಯನ್ ಡಾಲರ್‌ನ ಇಂಟರ್ನ್‌ಶಿಪ್ ಯೋಜನೆ, ಡೈರಿ ಹಸುಗಳ ಮೇಲೆ ಸಂಗೀತದ ಪರಿಣಾಮಗಳನ್ನು ಅಧ್ಯಯನ ಮಾಡಲು 1 ಮಿಲಿಯನ್ ಡಾಲರ್, ಮೀನಿನ ಮೇಲೆ ಮದ್ಯದ ಪರಿಣಾಮಗಳನ್ನು ಅಧ್ಯಯನ ಮಾಡಲು 1.7 ಮಿಲಿಯನ್ ಡಾಲರ್.
— Elon Musk (@elonmusk) November 13, 2024
ಮಸ್ಕ್ ಅವರು ವೆಚ್ಚ ಕಡಿತದ ಬಗ್ಗೆ ಮೊದಲಿನಿಂದಲೂ ಮಾತನಾಡಿಕೊಂಡೇ ಬಂದಿದ್ದಾರೆ. ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದ ನಂತರ 90% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದುಹಾಕಿದ್ದರು. 6 ಸಾವಿರ ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಇಳಿಸಿದ್ದರು. ಈ ವಿಚಾರ ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಟ್ವಿಟ್ಟರ್ ಸಾಮರ್ಥ್ಯ ಕುಂಠಿತವಾಗಲಿದೆ ಎಂದು ವರದಿಯಾಗಿತ್ತು. ಇದಕ್ಕೆ ಮಸ್ಕ್ ಟ್ವಿಟ್ಟರ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವ ವೇದಿಕೆ. ಇಲ್ಲಿ ಎಡಪಂಥೀಯ ಸಿದ್ಧಾಂತವನ್ನು ಹಂಚಿಕೊಳ್ಳುವವರಿಗೆ ಜಾಗ ಇಲ್ಲ. ಸಂಸ್ಥೆ ನಡೆಸಲು ಎಷ್ಟು ಉದ್ಯೋಗಿಗಳು ಬೇಕು ಅಷ್ಟು ಉದ್ಯೋಗಿಗಳು ಇದ್ದರೆ ಸಾಕು. ಅನಗತ್ಯ ಉದ್ಯೋಗಿಗಳ ಅಗತ್ಯವಿಲ್ಲ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.