ವಾಷಿಂಗ್ಟನ್: ಫಾರ್ಚೂನ್ 500ನ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪೈಕಿ ಟೆಸ್ಲಾ ಕಂಪನಿ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಫಾರ್ಚೂನ್ 500 ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ವರದಿಯನ್ನು ಹೊರತಂದಿದೆ. ಇದರಲ್ಲಿ ಮಸ್ಕ್ ಅಗ್ರ ಸ್ಥಾನವನ್ನು ಪಡೆದಿದ್ದರೆ, ಆಪಲ್, ನೆಟ್‌ಫ್ಲಿಕ್ಸ್ ಕಂಪನಿಯ ಸಿಇಒ ಸೇರಿದಂತೆ ಅನೇಕರು ಅಗ್ರ 10 ಸ್ಥಾನದ ಪಟ್ಟಿಯಲ್ಲಿದ್ದಾರೆ.
Advertisement
Advertisement
2021ರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳ ಹೆಸರು ಇಂತಿವೆ. ಇದರಲ್ಲಿ Apple, netflix, microsoftನ ಮುಖ್ಯಸ್ಥರು ಸೇರಿದಂತೆ ಕೆಲವು ಟೆಕ್ ಮತ್ತು ಬಯೋಟೆಕ್‌ನ ಸಿಇಒಗಳನ್ನು ಒಳಗೊಂಡಿವೆ. ಇದನ್ನೂ ಓದಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?
Advertisement
ಯಾರಿಗೆ ಎಷ್ಟು ಸಂಬಳ?
Advertisement
- ಟಿಮ್ ಕುಕ್ (ಆಪಲ್)- 770.5 ಬಿಲಿಯನ್ ಡಾಲರ್
- ಜೆನ್ಸನ್ ಹುವಾಂಗ್ (ಎನ್ವಿಡಿಯಾ) – 561 ಬಿಲಿಯನ್ ಡಾಲರ್
- ರೀಡ್ ಹೇಸ್ಟಿಂಗ್ಸ್ (ನೆಟ್‌ಫ್ಲಿಕ್ಸ್)- 453.5 ಬಿಲಿಯನ್ ಡಾಲರ್
- ಲಿಯೊನಾರ್ಡ್ ಷ್ಲಿಫರ್ (ರೆಜೆನೆರಾನ್ ಫಾರ್ಮಾಸ್ಯುಟಿಕಲ್) – 452.9 ಬಿಲಿಯನ್ ಡಾಲರ್
- ಮಾರ್ಕ್ ಬೆನಿಯೋಫ್ (ಸೇಲ್ಸ್ಫೋರ್ಸ್) – 439 ಬಿಲಿಯನ್ ಡಾಲರ್
- ಸತ್ಯ ನಾಡೆಲ್ಲ (ಮೈಕ್ರೋಸಾಫ್ಟ್)- 309.4 ಮಿಲಿಯನ್ ಡಾಲರ್
- ರಾಬರ್ಟ್ ಎ. ಕೊಟಿಕ್( ಆಕ್ಟಿವಿಸನ್ ಬ್ಲಿಝಾರ್ಡ್)- 296.7 ಮಿಲಿಯನ್ ಡಾಲರ್
- ಹಾಕ್ ಇ. ಟ್ಯಾನ್ (ಬ್ರಾಡ್ಕಾಮ್) – 288 ಮಿಲಿಯನ್ ಡಾಲರ್
- ಸಫ್ರಾ ಎ. ಕ್ಯಾಟ್ಜ್ (ಒರಾಕಲ್)- 239.5 ಮಿಲಿಯನ್ ಡಾಲರ್
500 ಸಿಇಒಗಳ ವೇತನ ಪ್ಯಾಕೇಜ್‌ಗಳನ್ನು ಮೌಲ್ಯಮಾಪನ ಮಾಡಿದ್ದು, ಇದರಲ್ಲಿ ಈ ಮೆಲಿನವರ ವೇತನವು ಸರಾಸರಿ ಒಟ್ಟು 15.9 ಮಿಲಿಯನ್ ಡಾಲರ್ ಅಧಿಕವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೆ. 30ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ