ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಮಸ್ಕ್‌ನ ಹೊಸ ಆವಿಷ್ಕಾರ ಆಟೋಮೊಬೈಲ್ ಹಾಗೂ ಸಾರಿಗೆ ವಲಯದಲ್ಲಿ ಭವಿಷ್ಯದ ಹೆಜ್ಜೆಯಾಗಲಿದೆ.
ಎಲೋನ್ ಮಸ್ಕ್ ಇತ್ತೀಚೆಗೆ ಫ್ಯೂಚರಿಸ್ಟಿಕ್ ಸ್ವಯಂ ಚಾಲಿತ ರೋಬೋಟ್ಯಾಕ್ಸಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಸ್ವಯಂಚಾಲಿತ ಟ್ಯಾಕ್ಸಿಗಳು ಜನರ ಪ್ರಯಾಣವನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?
Advertisement
Advertisement
2019ರಲ್ಲಿ ಮಸ್ಕ್ ಟೆಸ್ಲಾ ಸಂಪೂರ್ಣ ಸ್ವಯಂಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ವಿಶ್ವದ ಶ್ರೀಮಂತ, ಈ ಫ್ಯೂಚರಿಸ್ಟಿಕ್ ಕಾರುಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
Advertisement
ಮಸ್ಕ್‌ನ ಹೊಸ ಕಾರುಗಳು ಉತ್ಪಾದನೆಯನ್ನು ಸರಳಗೊಳಿಸುವುದಾಗಿ ಹಾಗೂ ಕಾರುಗಳ ಮುಖ್ಯ 3 ಭಾಗಗಳ ಮೇಲೆ ಹೆಚ್ಚಿನ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ. ಮಸ್ಕ್ ಇದರೊಂದಿಗೆ ಹೊಸದಾಗಿ ಮಾನವರೂಪಿ ರೋಬೋಟ್ ಅನ್ನು ತಯಾರಿಸುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಇದು ಮಾನವರು ಮಾಡುವ ಕೆಲಸಗಳಿಗೆ ಪರ್ಯಾಯವಾಗಿ ಬಳಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ
Advertisement
ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಖರೀದಿ ಮಾಡಿರುವುದಾಗಿ ಘೋಷಿಸಿದ್ದರು. ಮಸ್ಕ್ ಟ್ವಿಟ್ಟರ್‌ನ ಪಾಲುದಾರನಾಗುತ್ತಿದ್ದಂತೆ ಹಲವು ಹೊಸ ಬದಲಾವಣೆಗಳು ಆಗುವ ಬಗ್ಗೆ ನೆಟ್ಟಿಗರು ಊಹಿಸಿದ್ದಾರೆ.