ನವದೆಹಲಿ: ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್ (Twitter) ಸಂಸ್ಥೆ ಭಾರತದ ಮೂರು ಕಚೇರಿಗಳ ಪೈಕಿ ಎರಡನ್ನು ಮುಚ್ಚಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿರುವ ಒಂದು ಕಚೇರಿಯನ್ನು ಮಾತ್ರ ಮುಂದುವರಿಸಲಿದೆ ಎಂದು ವರದಿಯಾಗಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಬಹಳಷ್ಟು ಸಿಬ್ಬಂದಿಗೆ ಮನೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದೆ.
Advertisement
ಟ್ವಿಟ್ಟರ್ ಕಳೆದ ವರ್ಷಾಂತ್ಯದಲ್ಲಿ ಭಾರತದಲ್ಲಿರುವ ತನ್ನ 200ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ 90% ಪ್ರತಿಶತಕ್ಕಿಂತ ಹೆಚ್ಚಿನವರನ್ನು ವಜಾಗೊಳಿಸಿದೆ. ಈಗ ನವದೆಹಲಿ ಮತ್ತು ಮುಂಬೈನಲ್ಲಿರುವ ತನ್ನ ಕಚೇರಿಗಳನ್ನು ಸಹ ಮುಚ್ಚಿದೆ. ಬೆಂಗಳೂರಿನ ಕಚೇರಿಯಲ್ಲಿ ಅತಿ ಹೆಚ್ಚು ಎಂಜಿನಿಯರ್ಗಳನ್ನು ಹೊಂದಿರುವ ಕಾರಣ ಮುಂದುವರಿಸಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಉಚಿತ ಶಿಕ್ಷಣ – 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
Advertisement
Advertisement
ನವೆಂಬರ್ 2022 ರಲ್ಲಿ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಪ್ರಪಂಚದಾದ್ಯಂತ ಸಿಬ್ಬಂದಿಯನ್ನು ವಜಾ ಮಾಡಲು ಆರಂಭಿಸಿತು. ಇದರ ಭಾಗವಾಗಿ ಭಾರತದಲ್ಲಿ ಎಂಜಿನಿಯರಿಂಗ್, ಮಾರಾಟ ಮತ್ತು ಮಾರ್ಕೆಟಿಂಗ್ ಮತ್ತು ಸಂವಹನ ತಂಡಗಳಲ್ಲಿದ್ದ ಉದ್ಯೋಗಿಗಳನ್ನು ವಜಾಗೊಳಿಸಿದೆ.
Advertisement
ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ ಹಿನ್ನೆಲೆ ಉದ್ಯೋಗ ಕಡಿತಗೊಳಿಸಲಾಗುತ್ತಿದ್ದು, ಟ್ವಿಟ್ಟರ್ಗೆ ಅಮೂಲ್ಯವಾದ ಸೇವೆ ನೀಡಿದ ಹಲವಾರು ವ್ಯಕ್ತಿಗಳ ಮೇಲೆ ಇದು ಪರಿಣಾಮ ಬೀರುತ್ತಿದೆ, ಆದರೆ ಕಂಪನಿಯ ಯಶಸ್ಸನ್ನು ಮುಂದುವರಿಸಲು ಈ ಕ್ರಮವು ಅವಶ್ಯಕವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k