ವಾಷಿಂಗ್ಟನ್: ನಕಲಿ ಖಾತೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡದ್ದಕ್ಕೆ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದಾರೆ.
ಷೇರು ಮಾರುಕಟ್ಟೆಗೆ ಮಸ್ಕ್ ವಕೀಲರು ಖರೀದಿ ರದ್ದು ಮಾಡುವುದಾಗಿ ತಿಳಿಸಿದ್ದಾರೆ. ಟ್ವಿಟ್ಟರ್ ಬೋರ್ಡ್ ರದ್ದು ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.
Advertisement
ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಬ್ರೇಕಪ್ ಶುಲ್ಕ ಪಾವತಿಸುವ ಸಂಬಂಧ ಟ್ವಿಟ್ಟರ್ ಈಗ ಕೋರ್ಟ್ ಮೊರೆ ಹೋಗಲಿದೆ. ಅಷ್ಟೇ ಅಲ್ಲದೇ ಟ್ವಿಟ್ಟರ್ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್ ನಿರ್ಧಾರವೇ ಕಾರಣ ಎಂದು ಆರೋಪಿಸಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ
Advertisement
Advertisement
ಟ್ವಿಟ್ಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿವೆ ಎಂಬ ಕಾರಣದಿಂದ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಏಪ್ರಿಲ್‌ನಲ್ಲಿ ಮಸ್ಕ್ ತಿಳಿಸಿದ್ದರು.
Advertisement
ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದ್ರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು.
ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟ್ಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು.