ವಾಷಿಂಗ್ಟನ್: “ಮೊದಲು ಕಾರು ಮಾರಾಟಕ್ಕೆ ಅವಕಾಶ ನೀಡಿ. ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಉತ್ಪಾದನಾ ಘಟಕ ತೆರೆಯುತ್ತೇವೆ” – ಭಾರತ ಸರ್ಕಾರ ನೀಡಿದ ಷರತ್ತಿಗೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈ ಷರತ್ತು ಹಾಕಿದ್ದಾರೆ.
ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಬಗ್ಗೆ ನಿರಂತರವಾಗಿ ಸುದ್ದಿ ಹರಡುತ್ತಲೇ ಇದೆ. ಆದರೆ ಭಾರತ ಟೆಸ್ಲಾ ಕಂಪನಿಗೆ ಕಾರುಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ ಇರುವ ಹಿನ್ನೆಲೆ, ಉತ್ಪಾದನಾ ಘಟಕಗಳನ್ನೂ ತೆರೆಯುವುದು ಅಸಾಧ್ಯವಾಗಿದೆ.
Advertisement
Advertisement
ಈ ಬಗ್ಗೆ ಟ್ವೀಟ್‌ನಲ್ಲಿ ಉತ್ತರಿಸಿದ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಅಮೆರಿಕ ಮೂಲದ ಕಾರುಗಳನ್ನು ಮೊದಲು ಮಾರಾಟ ಮಾಡಲು ಹಾಗೂ ಸೇವೆ ನೀಡಲು ಯಾವುದೇ ದೇಶದಲ್ಲೇ ಅನುಮತಿ ಸಿಗದೇ ಉತ್ಪಾದನಾ ಘಟಕವನ್ನು ತೆರೆಯುವುದಿಲ್ಲ ಎಂದಿದ್ದಾರೆ.
Advertisement
ಎಲೋನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ತಯಾರು ಮಾಡಲು ಅಗತ್ಯದ ಆಮದಿಗೆ ಸುಂಕವನ್ನು ಕಡಿತಗೊಳಿಸುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಫಲ ನೀಡದ ಕಾರಣ ಮಸ್ಕ್ ಫೆಬ್ರವರಿಯಲ್ಲಿ ಟೆಸ್ಲಾವನ್ನು ಭಾರತಕ್ಕೆ ತರುವ ಯೋಜನೆ ಕೈ ಬಿಟ್ಟರು. ಇದನ್ನೂ ಓದಿ: ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ
Advertisement
Tesla will not put a manufacturing plant in any location where we are not allowed first to sell & service cars
— Elon Musk (@elonmusk) May 27, 2022
ಚೀನಾದಲ್ಲಿ ಉತ್ಪಾದನಾ ಘಟಕ ತೆರೆದಿರುವ ಮಸ್ಕ್ ಭಾರತದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಮಸ್ಕ್ ಈ ನೀತಿಗೆ ಕೇಂದ್ರ ಸಾರಿಗೆ ಸಚಿವ ಗಡ್ಕರಿ, ಚೀನಾದಿಂದ ಭಾರತಕ್ಕೆ ಕಾರುಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇಲ್ಲೇ ಘಟಕ ತೆರೆಯಲು ಅವಕಾಶ ನೀಡುತ್ತೇವೆ. ಘಟಕ ತೆರೆಯಲು ಬೇಕಾದ ಜಾಗ, ನೀರು, ವಿದ್ಯುತ್‌ಗಳನ್ನು ನಾವು ನೀಡುತ್ತೇವೆ. ಇಲ್ಲಿ ಘಟಕ ತೆರೆದರೆ ನಮ್ಮ ಜನಗಳಿಗೆ ಉದ್ಯೋಗ ಸಿಗುತ್ತದೆ ಎಂದು ಖಡಕ್ ಆಗಿ ಹೇಳಿ ತಿರುಗೇಟು ನೀಡಿದ್ದರು. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ
ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಭಾರತದ ಆಮದು ತೆರಿಗೆ ಜಾಸ್ತಿ ಆಯಿತು ಎಂದು ಹೇಳಿ ಉತ್ಪಾದನಾ ಘಟಕ ತೆರೆಯುವ ಯೋಜನೆಯಿಂದ ಮಸ್ಕ್ ಹಿಂದಕ್ಕೆ ಸರಿದಿದ್ದಾರೆ.