ವಾಷಿಂಗ್ಟನ್: ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ 2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದು, ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತದಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.
ಹಿಸ್ಟರಿ ಡಿಫೈನ್ ಟ್ವೀಟ್ ಖಾತೆಯೂ ಹಾಕಿದ್ದ ಆಗ್ರಾದ ಕೆಂಪು ಕೋಟೆಯ ಫೋಟೋಕ್ಕೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
Advertisement
It is amazing. I visited in 2007 and also saw the Taj Mahal, which truly is a wonder of the world.
— Elon Musk (@elonmusk) May 9, 2022
2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಆಗ್ರಾದ ತಾಜ್ ಮಹಲ್‍ನ್ನು ನೋಡಿದ್ದೆ. ಇದು ನಿಜವಾಗಿಯೂ ವಿಶ್ವದ ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮಸ್ಕ್ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದಾರಾ ಎಂಬ ಊಹಾಪೋಹಾಗಳು ಹರಿದಾಡುತ್ತಿದೆ.
Advertisement
ಅಷ್ಟೇ ಅಲ್ಲದೇ ಟೆಸ್ಲಾ ಮತ್ತು ಸ್ಪೇಸ್‍ಎಕ್ಸ್ ಸಿಇಒ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್ ಮಸ್ಕ್ ತಾತ್ಕಾಲಿಕ CEO?
Advertisement
In 1954, your grandparents flew to the Taj Mahal from South Africa, on their way to Australia. The only people to ever do this trip in a single-engine propeller plane, without a radio or GPS. Their motto “Live dangerously…. carefully.” https://t.co/JG4WQ7TbjF pic.twitter.com/YoOJP3HtSp
— Maye Musk (@mayemusk) May 9, 2022
1954ರಲ್ಲಿ ನಿಮ್ಮ ಅಜ್ಜಿಯರು ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾಕ್ಕೆ ಹೋಗುವ ದಾರಿಯಲ್ಲಿ ತಾಜ್ ಮಹಲ್ ಅನ್ನು ನೋಡಲು ಹೋಗಿದ್ದರು. ರೇಡಿಯೋ ಅಥವಾ ಜಿಪಿಎಸ್ ಇಲ್ಲದೆ ಈ ಪ್ರಯಾಣವನ್ನು ಮಾಡಲು ಏಕೈಕ ಮಾರ್ಗವೆಂದರೆ ಇಂಜಿನ್ ಪ್ರೊಪೆಲ್ಲರ್ ವಿಮಾನಗಳು ಮಾತ್ರ ಇದ್ದವು ಎಂದು ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಸೋಮವಾರದಂದು ಮಸ್ಕ್ ನಿಗೂಢ ಸಂದರ್ಭಗಳಲ್ಲಿ ಅವರ ಸಾವಿನ ಸಾಧ್ಯತೆಯ ಬಗ್ಗೆ ಊಹೆಗೆ ಮಾಡಿ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಇದನ್ನೂ ಓದಿ: ಸಚಿವ ಸುಧಾಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್