ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಚಾಟ್‌ಜಿಪಿಟಿ (ChatGPT) ತಯಾರಕ ಓಪನ್‌ಎಐಗೆ (OpenAI) ಟಕ್ಕರ್ ನೀಡಲು ಕೃತಕ ಬುದ್ಧಿಮತ್ತೆಯ (Artificial Intelligence) ಹೊಸ ಸ್ವಂತ ಕಂಪನಿಯನ್ನು (Company) ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ ಮಸ್ಕ್ ತನ್ನ ಹೊಸ ಎಐ (AI) ಕಂಪನಿಗಾಗಿ ಸಂಶೋಧಕರು ಹಾಗೂ ಎಂಜಿನಿಯರುಗಳ ತಂಡವನ್ನು ಒಟ್ಟುಗೂಡಿಸುತ್ತಿದ್ದಾರೆ. ಈ ಕಂಪನಿಗಾಗಿ ಅವರು ತಮ್ಮ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿಯಲ್ಲಿನ ಕೆಲ ಹೂಡಿಕೆದಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ವರದಿಗಳ ಪ್ರಕಾರ ಮಸ್ಕ್‌ನ ಹೊಸ ಕೃತಕ ಬುದ್ಧಿಮತ್ತೆ ಕಂಪನಿಯ ಹೆಸರು ಎಕ್ಸ್.ಎಐ (X.AI) ಆಗಿದೆ. ಕಳೆದ ತಿಂಗಳು ಮಸ್ಕ್ ಎಕ್ಸ್.ಎಐ ಕಾರ್ಪ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿಕೊಂಡಿದ್ದಾರೆ. ನೆವಾಡಾದಲ್ಲಿ ಈ ಕಂಪನಿ ಓಪನ್ ಆಗುವ ಸಾಧ್ಯತೆಯಿದೆ. ಮಸ್ಕ್ ತಮ್ಮ ಕುಟುಂಬದ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜೇರೆಡ್ ಬಿರ್ಚಾಲಾ ಅವರನ್ನು ಕಂಪನಿಗೆ ಕಾರ್ಯದರ್ಶಿಯಾಗಿ ಪಟ್ಟಿ ಮಾಡಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!
Advertisement
2015ರಲ್ಲಿ ಪ್ರಾರಂಭವಾದ ಲಾಭರಹಿತ ಓಪನ್‌ಎಐ ಸಂಸ್ಥೆಗೆ ಮಸ್ಕ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು 2018ರಲ್ಲಿ ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಇದೀಗ ಓಪನ್‌ಎಐಗೆ ಪ್ರತಿಸ್ಪರ್ಧಿಯಾಗಿ ಮಸ್ಕ್ ತಮ್ಮದೇ ಹೊಸ ಕಂಪನಿಯನ್ನು ತೆರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು