ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾಜಿ ಮಿತ್ರ ಎಲಾನ್ ಮಸ್ಕ್ ಶನಿವಾರ ‘ಅಮೆರಿಕ ಪಾರ್ಟಿ’ (America Party) ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ‘ಒನ್ ಬಿಗ್, ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ನಂತರ, ಟೆಕ್ ದೈತ್ಯ ಎಲಾನ್ ಮಸ್ಕ್ (Elon Musk) ‘ಅಮೆರಿಕ ಪಾರ್ಟಿ’ ಘೋಷಿಸುವ ನಿರ್ಧಾರ ಹೊರಬಿದ್ದಿತ್ತು. 2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲವಾಗಿ ಮಸ್ಕ್ ನಿಂತಿದ್ದರು. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ
ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಖರ್ಚು ಮತ್ತು ವೆಚ್ಚ ಮಸೂದೆ (ಡಿಒಜಿಇ) ವಿರೋಧಿಸಿ ರಿಪಬ್ಲಿಕನ್ ಸದಸ್ಯರ ವಿರುದ್ಧವೇ ಮಸ್ಕ್ ಸಿಡಿದೆದ್ದಿದ್ದಾರೆ. ಅಮೆರಿಕ ಸಂಸತ್ ಮುಂದೆ ಇರುವ ಮಸೂದೆ ಕುರಿತಂತೆ ಮಸ್ಕ್ ಟೀಕೆಗಳ ಬಳಿಕ ಇಬ್ಬರ ನಡುವೆ ಬಿರುಕು ಮೂಡಿತ್ತು. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ