ವಾಷಿಂಗ್ಟನ್: ವಿಶ್ವದ ಶ್ರೀಮಂತ ಹೊಸದೊಂದು ವಿಷಯಕ್ಕೆ ಇದೀಗ ಬಾರೀ ಸುದ್ದಿಯಾಗುತ್ತಿದ್ದಾರೆ. ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ತಮ್ಮ ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ.
ಆಸ್ಟ್ರೇಲಿಯಾದ ನಟಿ ನತಾಶಾ ಬ್ಯಾಸೆಟ್ ನನ್ನ ಹೊಸ ಗೆಳತಿ ಎಂದು ಮಸ್ಕ್ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ.
ಯಾರಿದು ನತಾಶಾ ಬ್ಯಾಸೆಟ್?
27 ವರ್ಷದ ನತಾಶಾ ಬ್ಯಾಸೆಟ್ ಆಸ್ಟ್ರೇಲಿಯಾದ ಸಿಡ್ನಿ ಮೂಲದವರು. ಇವರು ನಟನೆಯನ್ನು ಕಲಿಯಲು ನ್ಯೂಯಾರ್ಕ್ ತೆರಳಿದ್ದು, ತಮ್ಮ 14ನೇ ಪ್ರಾಯದಿಂದಲೇ ನಟನೆ ಮಾಡುತ್ತಿದ್ದಾರೆ. ರೋಮಿಯೋ ಜೂಲಿಯೆಟ್, ಬ್ರಿಟ್ನಿ ಸ್ಪಿಯರ್ಸ್ ಜೀವನಚರಿತ್ರೆ ಹಾಗೂ ಹೈಲ್ ಸೀಸರ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ನತಾಶಾ ಲಾಸ್ ಏಂಜಲಿಸ್‍ನಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್ ಅಗತ್ಯವಿಲ್ಲ – ಇಂಗ್ಲೆಂಡ್ ಘೋಷಣೆ
ಈ ಹಿಂದೆ ಒಳ್ಳೆಯ ಗೆಳೆತನ ಹೊಂದಿದ ಮಸ್ಕ್ ಹಾಗೂ ನತಾಶಾ ಕಳೆದ ಹಲವು ತಿಂಗಳುಗಳಿಂದ ಪ್ರೇಮಮಯ ಸಂಬಂಧ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್
ಎಲೋನ್ ಮಸ್ಕ್ ಈ ಹಿಂದೆ ಲೇಖಕಿ ಜಸ್ಟಿನ್ ಮಸ್ಕ್ ಹಾಗೂ ನಟಿ ತಲುಲಾಹ್ ರಿಲೇ ಅವರನ್ನು ವಿವಾಹವಾಗಿದ್ದರು.