ಮತ್ತೆ ವಿಶ್ವದ ನಂ.1 ಶ್ರೀಮಂತನಾದ ಎಲಾನ್ ಮಸ್ಕ್

Public TV
1 Min Read
Elon Musk

ವಾಷಿಂಗ್ಟನ್: ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ (Worlds Richest Person) ಹೊರಹೊಮ್ಮಿದ್ದಾರೆ. LMVH ಷೇರುಗಳ ಬೆಲೆ ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅವರನ್ನ ಹಿಂದಿಕ್ಕಿ, ಮಸ್ಕ್ ನಂ.1 ಸ್ಥಾನಕ್ಕೇರಿದ್ದಾರೆ.

tesla car elon musk 3 1

ಬುಧವಾರ ಪ್ಯಾರಿಸ್‌ನ ವಹಿವಾಟಿನಲ್ಲಿ ಅರ್ನಾಲ್ಟ್‌ನ LMVH ಷೇರುಗಳ ಬೆಲೆ 2.6% ಕಡಿಮೆಯಾಗಿದೆ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಲ್ಲದೇ ಎಲ್‌ವಿಎಂಹೆಚ್ ಷೇರುಗಳ ಬೆಲೆ ಕಳೆದ ಏಪ್ರಿಲ್‌ನಿಂದ ಸುಮಾರು 10 ಪ್ರತಿಶತದಷ್ಟು ಕುಸಿತ ಕಂಡಿದೆ. ಇದರಿಂದ ಒಂದೇ ದಿನದಲ್ಲಿ ಅರ್ನಾಲ್ಟ್‌ ಸಂಪತ್ತಿನ ಮೌಲ್ಯದಲ್ಲಿ ಏಕಾಏಕಿ 11 ಶತಕೋಟಿ ಡಾಲರ್‌ನಷ್ಟು ಸಂಪತ್ತು ಕರಗಿದೆ. ಇದನ್ನೂ ಓದಿ: ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್  ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

Elon Musk 1

2022ರ ಡಿಸೆಂಬರ್‌ನಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ (Tesla) ಷೇರು ಮೌಲ್ಯ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಮಸ್ಕ್‌ ಅವರ ಸಂಪತ್ತಿನ ಮೌಲ್ಯವು 200 ಶತಕೋಟಿ ಡಾಲರ್‌ನಷ್ಟು ಕಡಿಮೆಯಾಗಿತ್ತು. ಏಕೆಂದರೆ ಮಸ್ಕ್ ಅವರು ತಮ್ಮಲ್ಲಿದ್ದ ಷೇರುಗಳನ್ನ ಮಾರಾಟ ಮಾಡಿ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ್ದರು. ಇದರಿಂದಾಗಿ ಮೊದಲ ಬಾರಿಗೆ ಬ್ರಾಂಡ್ ಲೂಯಿ ವಿಟಾನ್ ಮೂಲ ಕಂಪನಿಯಾದ LMVH ಸಿಇಒ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಇದನ್ನೂ ಓದಿ: ಟ್ವಿಟ್ಟರ್‌ಗೆ ಹೊಸ ಸಿಇಒ – ಅಧಿಕೃತವಾಗಿ ಘೋಷಿಸಿದ ಮಸ್ಕ್ 

Share This Article