ನ್ಯೂಯಾರ್ಕ್: ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಖ್ಯಾತಿ ಗಳಿಸಿದ್ದ ಟೆಸ್ಲಾ ಕಂಪನಿ ಮಾಲೀಕ ಎಲೋನ್ ಮಸ್ಕ್ (Elon Musk) ಈಗ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ (World’s Richest Man) ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, 1ನೇ ಸ್ಥಾನವನ್ನು ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅಲಂಕರಿಸಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, 51 ವರ್ಷದ ಎಲೋನ್ ಮಸ್ಕ್ ಒಟ್ಟು 178.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. 188.6 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಅರ್ನಾಲ್ಟ್ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಹಣ ಕೊಡ್ತೇವೆ, ಮಕ್ಕಳನ್ನು ಹಡೆಯಿರಿ – ಪೋಷಕರಿಗೆ ಜಪಾನ್ ಆಫರ್
Advertisement
Advertisement
ಟ್ವಿಟ್ಟರ್ ಖರೀದಿ ಹೊಡೆತ
44 ಬಿಲಿಯನ್ ಡಾಲರ್‌ಗೆ (ಸುಮಾರು 3.38 ಲಕ್ಷ ಕೋಟಿ ರೂ.) ಟ್ವಿಟ್ಟರ್‌ನ್ನು ಮಸ್ಕ್ ಖರೀದಿಸಿದರು. ಅವರು ಬಿಡ್ ಮಾಡಿದ ನಂತರ ಇದೇ ರೀತಿಯ ವ್ಯವಹಾರಗಳ ಷೇರುಗಳು ಕುಸಿದಿವೆ. ಮಸ್ಕ್ ಅವರ ನಿವ್ವಳ ಮೌಲ್ಯವು ನ.8ರಂದು 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಯಿತು. ಏಕೆಂದರೆ ಟೆಸ್ಲಾ ಅವರ ಷೇರುಗಳನ್ನು ತೊಡೆದುಹಾಕಿತು.
Advertisement
Advertisement
ಅದ್ಯಾಗೂ ವಿಶ್ವದ ಟಾಪ್ 10 ಶ್ರೀಮಂತರನ್ನು ನಾವು ನೋಡುವುದಾರೆ ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾಡ್ ಅರ್ನಾಲ್ಟ್ (188.6 ಶತಕೋಟಿ ಡಾಲರ್), ದ್ವಿತೀಯ ಸ್ಥಾನ ಎಲಾನ್ ಮಸ್ಕ್ (176.6 ಶತಕೋಟಿ ಡಾಲರ್), ಮೂರನೇ ಸ್ಥಾನದಲ್ಲಿ ಭಾರತದ ಗೌತಮ್ ಅದಾನಿ (134 ಶತಕೋಟಿ ಡಾಲರ್) ಇದ್ದಾರೆ. ಇದನ್ನೂ ಓದಿ: ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು