ನ್ಯೂಯಾರ್ಕ್: ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಗಾಯಕಿ ಹಾಗೂ ಗೀತರಚನೆಗಾರ್ತಿ ಗ್ರಿಮ್ಸ್ ಅವರು ಡಿಸೆಂಬರ್ 2021ರಲ್ಲಿ ಬಾಡಿಗೆ ಮೂಲಕ ತಮ್ಮ ಎರಡನೇ ಮಗುವನ್ನು ರಹಸ್ಯವಾಗಿ ಸ್ವಾಗತಿಸಿದ್ದಾರೆ.
ಮಗುವಿನ ಪೂರ್ಣ ಹೆಸರು ಎಕ್ಸಾ ಡಾರ್ಕ್ ಸೈಡೆರೆಲ್, ಅಂತ ಗ್ರಿಮ್ಸ್ ಅವರು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಮಾಜಿ ದಂಪತಿ ತಮ್ಮ ಮಗುವಿಗೆ ‘ವೈ’ ಎಂದು ಅಡ್ಡಹೆಸರು ಇಟ್ಟಿದ್ದಾರೆ.
Advertisement
ಗ್ರೀಮ್ಸ್ ಅವರು ಪೀಪಲ್ ಮ್ಯಾಗಜೀನ್ನ ವಿಶೇಷ ಸಂಚಿಕೆಯಲ್ಲಿ ಮಾತನಾಡುತ್ತಾ ತಮ್ಮ ಮಗಳ ವಿಶಿಷ್ಟ ಹೆಸರಿನ ಒಳ ಅರ್ಥವನ್ನು ವಿವರಿಸಿದರು. ಎಕ್ಸಾ ಡಾರ್ಕ್ ಸೈಡೆರೆಲ್ ಎಂದರೆ ಎಕ್ಸಾ ಸೂಪರ್ ಕಂಪ್ಯೂಟಿಂಗ್ ಪದವಾದ ಎಕ್ಸಾಫೆÇ್ಲೀಪ್ಸ್ ಅನ್ನು ಸೂಚಿಸುತ್ತದೆ. ಆದರೆ ಡಾರ್ಕ್ ಎಂಬ ಪದ ‘ಅಜ್ಞಾತ’ ವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
Advertisement
Advertisement
ಜನರು ಈ ಹೆಸರಿಗೆ ಭಯಪಡುತ್ತಾರೆ. ಆದರೆ ನಿಜವಾಗಿಯೂ ಇದು ಫೋಟಾನ್ಗಳ ಅನುಪಸ್ಥಿತಿಯಾಗಿದೆ. ಡಾರ್ಕ್ನ ಒಳ ಅರ್ಥವೆನೆಂದರೆ ನಮ್ಮ ಬ್ರಹ್ಮಾಂಡದ ಸುಂದರವಾದ ರಹಸ್ಯವಾಗಿದೆ. ಈ ಸಂದರ್ಭದಲ್ಲಿ ತಮ್ಮ ಮಗಳ ಎರಡನೇ ಅಡ್ಡ ಹೆಸರಿನ ವಿಶೇಷತೆ ಬಗ್ಗೆ ತಿಳಿಸಿದ ಅವರು, ‘ವೈ’ ನ ಪೂರ್ಣ ಹೆಸರಿನ ಮೂರನೇ ಭಾಗವಾದ ‘ಸೈಡೆರೆಲ್’ ಅನ್ನು ಡೀಯರ್-ಈ-ಎಲ್ ಎಂದು ಉಚ್ಚರಿಸಲಾಗುತ್ತದೆ ಎಂದರು. ಇದನ್ನೂ ಓದಿ: Bulldozer is Back – ಟ್ರೆಂಡ್ ಆಯ್ತು ಬುಲ್ಡೋಜರ್, ಬುಲ್ಡೋಜರ್ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ
Advertisement
ಸೈಡೆರೆಲ್ ಎಂಬ ಪದವು ಬ್ರಹ್ಮಾಂಡದ ನಿಜವಾದ ಸಮಯ, ನಕ್ಷತ್ರದ ಸಮಯ, ಆಳವಾದ ಬಾಹ್ಯಾಕಾಶ ಸಮಯ, ಆದರೆ ನಮ್ಮ ಸಂಬಂಧಿತ ಭೂಮಿಯ ಸಮಯವಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.
ತಮ್ಮ ಮಗಳಿಗೆ ಒಡಿಸ್ಸಿಯಸ್ ಮಸ್ಕ್ ಎಂದು ಹೆಸರಿಸಲು ಪ್ರಯತ್ನಿಸಿದ್ದರಂತೆ. ಏಕೆಂದರೆ ಒಡಿಸ್ಸಿಯಸ್ ಎಂಬ ಹೆಸರಿಡುವುದು ನನ್ನ ಕನಸಾಗಿತ್ತು. ಆದಾಗ್ಯೂ ನಾನು ಮಗಳಿಗೆ ಎಕ್ಸಾ ಡಾರ್ಕ್ ಸೈಡೆರೇಲ್ ಎಂಬ ಹೆಸರನ್ನು ಇಟ್ಟಿದ್ದೇನೆ ಎಂದು ಗ್ರೀಮ್ಸ್ ತಿಳಿಸಿದ್ದಾರೆ.
ಗ್ರಿಮ್ಸ್ಗೆ ಈಗಾಗಲೇ 22 ತಿಂಗಳ ಮಗು ಇದ್ದು, ಟೆಸ್ಲಾ ಕಂಪನಿಯ ಮಾಲಿಕರಾದ ಎಲೋನ್ ಮಸ್ಕ್ ಜೊತೆ ಮೂರು ವರ್ಷಗಳ ನಂತರ ಇಬ್ಬರೂ ಸೆಪ್ಟೆಂಬರ್ 2021ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಆದರೆ ಇವರಿಬ್ಬರು ಮತ್ತೆ ಒಂದಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?
ಪ್ರತ್ಯೇಕತೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಬಹುಶಃ ಅವನನ್ನು ನನ್ನ ಗೆಳೆಯ ಎಂದು ಹೇಳಿಕೊಳ್ಳತ್ತೆನೆ. ಆದರೆ ನಾವು ತುಂಬಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನಾವು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತೇವೆ. ಅದಲ್ಲದೆ ನಾವು ಉತ್ತಮ ಸ್ನೇಹಿತರು. ನಾವು ಯಾವಾಗಲೂ ಒಬ್ಬರನ್ನೊಬ್ಬರು ನೋಡುತ್ತಲೇ ಇರುತ್ತೇವೆ. ನಾವು ನಮ್ಮದೇ ಆದ ವಿಷಯವನ್ನು ಹೊಂದಿದ್ದೇವೆ. ಇತರ ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ಇವರಿಬ್ಬರು ಹೆಚ್ಚಿನ ಮಕ್ಕಳನ್ನು ಬೆಳೆಸಲು ಯೋಜಿಸಿದ್ದೇವೆ ಎಂದು ಪ್ರಕಟಣೆಗೆ ತಿಳಿಸಿದ್ದು, ನಾವು ಯಾವಾಗಲೂ ಕನಿಷ್ಠ ಮೂರು ಅಥವಾ ನಾಲ್ಕು ಮಕ್ಕಳನ್ನು ಬಯಸುತ್ತಿದ್ದೇವು ಎಂದು ತಿಳಿಸಿದರು.