ವಾಷಿಂಗ್ಟನ್: ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಭಾರತಕ್ಕೆ ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದಾರೆ.
ಎಲೋನ್ ಮಸ್ಕ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆ ಕುರಿತು ಗುರುವಾರ ತಿಳಿಸಿದ್ದಾರೆ. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ
Advertisement
Still working through a lot of challenges with the government
— Elon Musk (@elonmusk) January 12, 2022
Advertisement
ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಮಸ್ಕ್ ಉತ್ಸುಕರಾಗಿದ್ದಾರೆ. ಆದರೆ ಸರ್ಕಾರದ ಆಮದು ಸುಂಕ ಜಾಸ್ತಿ ವಿಧಿಸಿದ್ದರಿಂದ ಟೆಸ್ಲಾಗೆ ಹಿನ್ನಡೆಯಾಗಿದೆ.
Advertisement
ಮಸ್ಕ್ ಟ್ವೀಟ್‍ಗೆ ವಿರೋಧ:
ಎಲೋನ್ ಮಸ್ಕ್ ಅವರ ಈ ಟ್ವೀಟ್‍ಗೆ ಸರ್ಕಾರ ಸಿಟ್ಟಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲೋನ್ ಮಸ್ಕ್ ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಿದ್ದಾರೆ. ಟೆಸ್ಲಾ ಕಾರುಗಳ ಮೇಲಿರುವ ಆಮದು ಸುಂಕವನ್ನು ಕಡಿಮೆ ಮಾಡಲು ಈ ತಂತ್ರ ಅನುಸರಿಸುತ್ತಿದ್ದಾರೆ. ಇಂತಹ ಒತ್ತಡಗಳಿಗೆ ಸರ್ಕಾರ ಮಣಿಯುವುದಿಲ್ಲ. ಟೆಸ್ಲಾ ಸ್ಥಳೀಯವಾಗಿ ಕಾರುಗಳನ್ನು ಉತ್ಪಾದಿಸಿದರೆ ಮಾತ್ರವೇ ಪ್ರಯೋಜನ ಪಡೆಯಲು ಸಾಧ್ಯ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ಟೆಸ್ಲಾ ಕಾರು ಉತ್ಪಾದನಾ ಘಟಕ: ಸಿಎಂ ಬಿಎಸ್‌ವೈ ಅಧಿಕೃತ ಪ್ರಕಟ
Advertisement
ಟೆಸ್ಲಾ ಚೀನಾದಲ್ಲಿ ದೊಡ್ಡ ಫ್ಯಾಕ್ಟರಿ ತೆರೆದಿದ್ದು ಏಷ್ಯಾ ಖಂಡದ ದೇಶಗಳಿಗೆ ಇಲ್ಲಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿತ್ತು. ಇದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ ಕಾರನ್ನು ಟೆಸ್ಲಾ ಉತ್ಪಾದಿಸಬೇಕು. ಚೀನಾ ದೇಶದಲ್ಲಿ ಉತ್ಪಾದನೆಯಾದ ಕಾರನ್ನು ಭಾರತದಲ್ಲಿ ಮಾರಾಟ ಮಾಡಬಾರದು. ಇಲ್ಲಿ ಘಟಕ ತೆರೆಯಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಸ್ಲಾ ಘಟಕ – ಯಾವ ಕಾರು ಬಿಡುಗಡೆಯಾಗಬಹುದು? ಬೆಲೆ ಎಷ್ಟು?
ಕೆಲ ದಿನಗಳ ಹಿಂದೆ ಎಲೋನ್ ಮಸ್ಕ್ ಅವರ ಸ್ಟಾರ್‍ಲಿಂಕ್ ಕಂಪನಿ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‍ನೆಟ್ ಸೇವೆ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಕಂಪನಿ ಈ ಯೋಜನೆ ಜಾರಿ ಸಂಬಂಧ ಯಾವುದೇ ಮಾತುಕತೆ ನಡೆಸಿಲ್ಲ. ಹೀಗಾಗಿ ಈ ಸೇವೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು.