ವಾಷಿಂಗ್ಟನ್: ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ 2016 ರಲ್ಲಿ ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಕೇಳಿಬಂದಿದ್ದು, ಈ ವಿಷಯವನ್ನು ಎಲ್ಲಿಯೂ ಬಾಯಿ ಬಿಡದಂತೆ ಮೌನವಾಗಿರಲು ಆಕೆಗೆ ಬರೋಬ್ಬರಿ 2,50,000 ಡಾಲರ್(ಸುಮಾರು 1.94 ಕೋಟಿ ರೂ.) ನೀಡಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ಜೆಟ್ ಒಂದರಲ್ಲಿ ಪ್ರಯಾಣಿಸುವಾಗ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಎಲೋನ್ ಮಸ್ಕ್ ನಿರಾಕರಿಸಿದ್ದಾರೆ. ಇದು ಸಂಪೂರ್ಣ ಸುಳ್ಳು ಎಂದು ಮಸ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?
Advertisement
Advertisement
ಘಟನೆ ಏನು?
ಎಲೋನ್ ಮಸ್ಕ್ 2016ರಲ್ಲಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿರುವಾಗ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಲಾಗಿದ್ದು, ಈ ಘಟನೆಯನ್ನು ಇತ್ಯರ್ಥ ಮಾಡಿಕೊಳ್ಳಲು ಸ್ಪೇಸ್‌ಎಕ್ಸ್ ಕಂಪನಿ ಆಕೆಗೆ 2018ರಲ್ಲಿ 2,50,000 ಡಾಲರ್ ನೀಡಿರುವುದಾಗಿ ಬಿಜಿನೆಸ್ ಇನ್‌ಸೈಡರ್ ವರದಿ ಮಾಡಿತ್ತು. ವರದಿಯಲ್ಲಿ ಗಗನಸಖಿಯ ಸ್ನೇಹಿತೆ ಎಂದು ಹೇಳಿಕೊಂಡ ಅನಾಮಧೇಯ ವ್ಯಕ್ತಿಯ ಹೇಳಿಕೆ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್
Advertisement
Advertisement
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಸ್ಕ್, ಇದು ಶುದ್ಧ ಸುಳ್ಳು. ಇದು ರಾಜಕೀಯ ಪ್ರೇರಿತ ವರದಿ. ಒಂದು ವೇಳೆ ನಾನು ಈ ರೀತಿ ಮಾಡಿದ್ದರೆ, ನನ್ನ ಸಂಪೂರ್ಣ 30 ವರ್ಷಗಳ ವೃತ್ತಿ ಜೀವನದಲ್ಲಿ ಬೆಳಕಿಗೆ ಬರುತ್ತಿರುವ ಮೊದಲ ಆರೋಪವಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.