Bengaluru CityCinemaDistrictsKarnatakaLatest

ಸತಿ-ಪತಿಗಳಾದ್ರು ಹರಿಪ್ರಿಯಾ-ಸೃಜನ್ ಲೋಕೇಶ್!

ಬೆಂಗಳೂರು: ನಟ ಸೃಜನ್ ಲೋಕೇಶ್ ಸ್ವಲ್ಪ ದಿನದಿಂದ ಸಿನಿಮಾರಂಗದಿಂದ ದೂರವಿದ್ದು, ಈಗ ಮತ್ತೆ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾದ ಮೂಲಕ ನಟರಾಗಿ ವಾಪಸ್ ಬಂದಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ನಟಿ ಹರಿಪ್ರಿಯಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಸೃಜನ್ ಮತ್ತು ನಟಿ ಹರಿಪ್ರಿಯಾ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಇವರಿಬ್ಬರು ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ದರ್ಶನ್, ನಟಿ ತಾರಾ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಭಾಗಿಯಾಗಿದ್ದರು.

haripriya

ಈ ಸಿನಿಮಾವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾಕ್ಕಾಗಿ ಸೃಜನ್ ಮತ್ತು ಹರಿಪ್ರಿಯಾ ಫೋಟೋ ಶೂಟ್ ಮಾಡಿಸಿದ್ದು, ಇವರಿಬ್ಬರು ಸತಿ-ಪತಿಗಳಂತೆ ಪೋಸ್ ಕೊಟ್ಟಿದ್ದಾರೆ.

ತಮ್ಮ ಸಿನಿಮಾದ ಬಗ್ಗೆ ನಟಿ ಹರಿಪ್ರಿಯಾ ಅವರು ಕೂಡ ಟ್ವೀಟ್ ಮಾಡಿದ್ದು, ಇಂದು ನಾನು ಅಭಿನಯಿಸುತ್ತಿರುವ ‘ಬಿಚ್ಚುಗಾತ್ತಿ’ ಸಿನಿಮಾ ಮುಹೂರ್ತ ನಡೆಯಲಿದ್ದು, ಕಳೆದ ದಿನವಷ್ಟೆ ‘ಎಲ್ಲಿದ್ದ ಇಲ್ಲಿ ತನಕ’ ಸಿನಿಮಾ ಲಾಂಚ್ ಆಗಿದೆ. ಈ ಎರಡು ಸಿನಿಮಾದಲ್ಲಿ ನಾನು ತುಂಬಾ ಪ್ರಮುಖವಾದ ಪಾತ್ರವನ್ನು ಮಾಡುತ್ತಿದ್ದೇನೆ. ಆದ್ದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ಇದೆಲ್ಲಾ ನಿಮ್ಮ ಪ್ರೀತಿ ಮತ್ತು ಶುಭಾಶಯಗಳು” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *