ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

Public TV
2 Min Read
chaithra 3

ದೊಡ್ಮನೆಯಲ್ಲಿ ಸದ್ಯ ಉಳಿದಿರೋದು ಈಗ 12 ಸ್ಪರ್ಧಿಗಳು. ಈ ವಾರ ಇಬ್ಬರಲ್ಲಿ ಒಬ್ಬರು ಎಲಿಮಿನೇಷನ್ ಆಗೋ ಸಾಧ್ಯತೆ ಇದೆ. ಆ ಇಬ್ಬರು ಯಾರು ಅನ್ನೋದು ಈಗಾಗಲೇ ಫೈನಲ್ ಆಗಿದೆ. ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಡೇಂಜರ್ ಜೋನ್‌ಗೆ ಹೋಗಿದ್ದು, ಇಬ್ಬರಿಗೂ ಬಿಗ್ ಬಾಸ್ ಮನೆಯಲ್ಲಿ ಬೇರೆ, ಬೇರೆ ದಾರಿ ತೋರಿಸಲಾಗಿದೆ. ಇನ್ನೂ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಕೊಡಲಾಗಿದ್ದು, ಸ್ಪರ್ಧಿಗಳ ಚುಚ್ಚು ಮಾತು ಕೇಳಿ ಕಣ್ಣೀರಿಟ್ಟಿದ್ದಾರೆ.

chaithra 1 2

ಈ ವಾರಾಂತ್ಯ ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಸುದೀಪ್ (Sudeep) ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಅವರನ್ನ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ. ಐಶ್ವರ್ಯಾ ಅವರನ್ನ ಆಕ್ಟಿವಿಟಿ ರೂಮ್‌ಗೆ ಕಳುಹಿಸಿದ್ರೆ, ಚೈತ್ರಾ ಅವರು ಕನ್ಫೆಷನ್ ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ.

aishwarya

ವೀಕೆಂಡ್‌ ಎಪಿಸೋಡ್‌ನಲ್ಲಿ ಸುದೀಪ್ ಅವರು ಚೈತ್ರಾ ಮತ್ತು ಐಶ್ವರ್ಯ ಅವರೇ ಒಬ್ಬರು ಹೋಗ್ತಿರೋ, ಇಬ್ಬರು ಹೋಗ್ತಿರೋ ಅನ್ನೋ ಸಸ್ಪೆನ್ಸ್ ಹೆಚ್ಚಿಸಿದ್ದಾರೆ. ಅಂತಿಮವಾಗಿ ಇಬ್ಬರು ಹೊರಗಡೆ ಹೋಗ್ತಾರೆ. ಆದರೆ ಐಶ್ವರ್ಯಾ ಹಾಗೂ ಚೈತ್ರಾ ಮೇನ್ ಡೋರ್ ಇಂದ ಹೊರಗಡೆ ಹೋಗಿಲ್ಲ.

ಚೈತ್ರಾ ಅವರು ಬಿಗ್ ಬಾಸ್ ಹೇಳೋ ತನಕ ಕನ್ಫೆಷನ್ ರೂಮ್‌ನಿಂದ ಹೊರಗೆ ಬರುವಂತಿಲ್ಲ. ಅಲ್ಲಿಂದನೇ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ಇರೋದನ್ನೆಲ್ಲಾ ನೋಡ್ತಿದ್ದಾರೆ. ಐಶ್ವರ್ಯಾ ಔಟ್ ಆದ್ರಾ? ಹೇಗೆ ಎಂಬುದನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಹನುಮಂತ ‘ಚೈತ್ರ ಅಲ್ಲ ಹೋದಳು ಪಾಪ’ ಎಂದರೆ ಧನರಾಜ್ ಅವರು ಚೈತ್ರಾಗೆ ಟಾ ಟಾ, ಬೈ, ಬೈ ಮಾಡಿದ್ದಾರೆ. ಚೈತ್ರಾ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ರಜತ್ ಅವರು ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು ಎಂದಿದ್ದಾರೆ. ಈ ಎಲ್ಲಾ ಮಾತುಗಳನ್ನ ಚೈತ್ರಾ ಅವರು ಕೇಳಿಸಿಕೊಂಡಿದ್ದು, ನಿಜವಾದ ಬಿಗ್ ಬಾಸ್ ಮನೆಯ ಆಟ ಅಂದ್ರೆ ಇದೆ ಎಂದು ಚುಚ್ಚು ಮಾತುಗಳನ್ನ ಕೇಳಿ ಗಳಗಳನೇ ಅತ್ತಿದ್ದಾರೆ. ಹಾಗಾದ್ರೆ ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.

Share This Article