DistrictsHassanKarnatakaLatestMain Post

ಫಸಲು ಬರುವ ಮುನ್ನವೇ ಆನೆಗಳ ಪಾಲಾದ ಭತ್ತ- ಸರ್ಕಾರದ ವಿರುದ್ಧ ರೈತರ ಆಕ್ರೋಶ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ಸಂಘರ್ಷಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳ ರೈತರು ಆನೆಗಳ ಹಾವಳಿಯಿಂದ ಕಂಗೆಡುವಂತಾಗಿದೆ.

ಫಸಲು ಬರುವ ಮುನ್ನವೇ ಆನೆಗಳ ಪಾಲಾದ ಭತ್ತ- ಸರ್ಕಾರದ ವಿರುದ್ಧ ರೈತರ ಆಕ್ರೋಶ

ಕಳೆದ ಕೆಲ ವರ್ಷಗಳಿಂದ ಬರದಿಂದ ಕಂಗಾಲಾಗಿದ್ದ ರೈತರು ಈ ಬಾರಿ ಭತ್ತದ ಬೆಳೆ ಮಾಡಿದ್ದಾರೆ. ಆದರೆ ಫಸಲು ಕೈಗೆ ಬರುವ ಮುನ್ನವೇ ಆನೆಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಾಗಿದೆ. ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿ, ಬನವಾಸೆ, ಹೊಸಗದ್ದೆ, ರಾಜೆಂದ್ರಪುರ, ಕುನಿಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆ ಆನರ ಹಾವಳಿಗೆ ನಾಶವಾಗುತ್ತಿದೆ.

ಫಸಲು ಬರುವ ಮುನ್ನವೇ ಆನೆಗಳ ಪಾಲಾದ ಭತ್ತ- ಸರ್ಕಾರದ ವಿರುದ್ಧ ರೈತರ ಆಕ್ರೋಶ

ಕಟಾವಿಗೆ ಬಂದ ಬೆಳೆಯನ್ನು ಆನೆಗಳು ಹಾಳುಗೆಡುವುತ್ತಿದ್ದು ರೈತರು ಮೂಕ ಪ್ರೇಕ್ಷಕರಂತೆ ನೋಡುವಂತಾಗಿದೆ. ಲಕ್ಷಾಂತರ ಬೆಲೆಯ ಭತ್ತದ ಬೆಳೆಯ ಗದ್ದೆಗಳಲ್ಲಿ ಓಡಾಡುತ್ತಿರುವ ಆನೆಗಳಿಂದ ರೈತರು ಜೀವಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೆಲವೊಮ್ಮೆ ಆನೆಗಳನ್ನು ಕಾಡಿಗೆ ಅಟ್ಟಲು ರೈತರೇ ಮುಂದಾಗುತ್ತಾರೆ.

ಫಸಲು ಬರುವ ಮುನ್ನವೇ ಆನೆಗಳ ಪಾಲಾದ ಭತ್ತ- ಸರ್ಕಾರದ ವಿರುದ್ಧ ರೈತರ ಆಕ್ರೋಶ

ಆನೆ ಕಾರಿಡಾರ್ ನಿರ್ಮಾಣ ಸೇರಿದಂತೆ ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಾರೆ. ಅಲ್ಲದೇ ಆನೆ ಹಾವಳಿ ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *

Back to top button