ಚಿಕ್ಕಮಗಳೂರು: ಭದ್ರಾ ಹಿನ್ನಿರಿನ ಪ್ರದೇಶದಿಂದ 30ಕ್ಕೂ ಹೆಚ್ಚು ಕಾಡಾನೆಗಳು ಎನ್.ಆರ್.ಪುರದ ಗ್ರಾಮಗಳತ್ತ ಬರುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಎನ್.ಆರ್.ಪುರ (N.R Pura) ತಾಲೂಕಿನ ಹಿನ್ನೀರಿನ ಬಳಿ ಆನೆಗಳ ಹಿಂಡು ಕಾಣಿಸಿಕೊಂಡಿವೆ. ಆನೆಗಳು ಭದ್ರಾ ಅಭಯಾರಣ್ಯಕ್ಕೆ ಹೋಗಿ ಮತ್ತೆ ವಾಪಸ್ಸಾಗುತ್ತಿವೆ. ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಡ್ರೋಣ್ ಬಳಸಿಕೊಂಡು ಆನೆಗಳ ಚಲನಾವಲನದ ಮೇಲೆ ನಿಗಾ ಇಟ್ಟಿದ್ದಾರೆ. ಈ ಮೂಲಕ ಕಾಡಾನೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಆನೆಗಳು ಗ್ರಾಮದೆಡೆಗೆ ಬರುತ್ತಿರುವುದರಿಂದ ಭದ್ರಾ ಹಿನ್ನೀರಿನ ಸುತ್ತಮುತ್ತ ಇರುವ ಹಾಗಲಮನೆ, ರಾವೂರು ಸೇರಿ ಹಲವು ಗ್ರಾಮಗಳ ಜನರಲ್ಲಿ ಅತಂಕ ಮನೆಮಾಡಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಕಾಡಾನೆ ಹಾಗೂ ಮಾನವನ ಸಂಘರ್ಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ಎನ್.ಆರ್‍ಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಳು. ಅಲ್ಲದೇ ಇತ್ತೀಚೆಗೆ ಎಟಿಎಫ್ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಮರ ಏರಿ ಆನೆ ದಾಳಿಯಿಂದ ಬಚಾವ್ ಆಗಿದ್ದರು.